ಪಾಕ್​ ವಿಮಾನಗಳಿಗೆ ಭಾರತದ ವಾಯುಪ್ರದೇಶ ನಿರ್ಬಂಧ: ಸೆಪ್ಟೆಂಬರ್​ 24 ರವರೆಗೆ ವಿಸ್ತರಿಕೆ!| Airspace

untitled-design-2025-08-23t130657431-68a96fcf00d7d
Published on

Airspace : ಭಾರತವು ಪಾಕಿಸ್ತಾನದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಕೆಲವು ದಿನಗಳಿಂದ ಸ್ಥಗಿತಗೊಳಿಸಿದ್ದು, ಮತ್ತೆ ತನ್ನ ವಾಯುಪ್ರದೇಶದ ಮುಚ್ಚುವಿಕೆಯನ್ನು ಸೆಪ್ಟೆಂಬರ್​ 24 ರವರೆಗೆ ವಿಸ್ತರಿಸಿ ದಿಟ್ಟ ಉತ್ತರ ನೀಡಿದೆ.

ಎರಡೂ ದೇಶಗಳು ವಾಯುಪ್ರದೇಶವನ್ನು ಮುಚ್ಚುವಿಕೆಯ ವಿಸ್ತರಿಸುವ ಕುರಿತು ವಾಯುಪಡೆಗೆ ಪ್ರತ್ಯೇಕ ಸೂಚನೆಯನ್ನು ನೀಡಿದೆ.

ಏಪ್ರಿಲ್​ 22 ರಂದು ನಡೆದ ಪಹಲ್ಗಾಮ್​ ಭಯೋತ್ಪಾದಕ ದಾಳಿಯಲ್ಲಿ 26 ಭಾರತೀಯರು ಸಾವನ್ನಪ್ಪಿದ ನಂತರ, ಭಾರತ ಸರ್ಕಾರ ಏಪ್ರಿಲ್​ 30 ರಿಂದ ಜಾರಿಗೆ ಬರುವಂತೆ ವಿಮಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಒಡೆತನದ ವಿಮಾನಗಳು, ಮಿಲಿಟರಿ ವಿಮಾನಗಳು, ಗುತ್ತಿಗೆ ಪಡೆದ ವಿಮಾನಗಳ ಹಾರಾಟವನ್ನು ಭಾರತ ತನ್ನ ವಾಯುಪ್ರದೆಶದಲ್ಲಿ ನಿರ್ಬಂಧಿಸಿತ್ತು. ಇದೀಗ ಮತ್ತೆ ವಿಮಾನದ ಹಾರಾಟದ ನಿರ್ಬಂಧವನ್ನು ಮುಂದೂಡಿದ್ದು, ಸೆಪ್ಟೆಂಬರ್​ 24 ರ ನಂತರ ಏನಾಗುತ್ತದೆ ಎಂದು ಕಾದು ನೋಡಬೇಕಾಗಿದೆ.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net