ಸವಿತಾ ಅರುಣ್‌ಗೆ ಮಿಸೆಸ್ ಪೆಸಿಫಿಕ್ ಗೌರವ

savita
Published on

ಶಿವಮೊಗ್ಗ: ಮಾಜಿ ಉಪಮೇಯರ್ ರೇಖಾ ಚಂದ್ರಶೇಖರ್ ಅವರ ಪುತ್ರಿ ಸವಿತಾ ಅರುಣ್ ಮಿಸೆಸ್ ಗ್ಲೋಬ್ ಹಾಗೂ ಮಿಸೆಸ್ ಏಷ್ಯಾ ಪೆಸಿಫಿಕ್ ಗೌರವಕ್ಕೆ ಭಾಜನರಾಗಿದ್ದಾರೆ. ಶಿವಮೊಗ್ಗದಲ್ಲಿ ವ್ಯಾಸಂಗ ಮಾಡಿದ್ದ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಮಸ್ಕತ್‌ನಲ್ಲಿ ಜೀ ಈವೆಂಟ್ ಸಂಸ್ಥೆ ಜುಲೈ 6ರಂದು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸೆಸ್ ಪೆಸಿಫಿಕ್ ಕ್ರೌನ್ ಧರಿಸಿರುವ ಸವಿತಾ ಅರುಣ್, ನನ್ನ ಸಾಧನೆಗೆ ಪಾಲಕರು ಹಾಗೂ ಪತಿಯ ಸಹಕಾರವೇ ಕಾರಣ ಎಂದಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ ರಂಗೋಲಿ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ನಾನು ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೆ. ವಿವಾಹವಾದ ಬಳಿಕವೂ ಕ್ರಿಯಾಶೀಲತೆಯನ್ನು ಉಳಿಸಿಕೊಂಡು ಅನೇಕ ಚಟುವಟಿಕೆ ನಡೆಸುತ್ತಿದ್ದೆ. ಕಳೆದ ವರ್ಷ ಮಿಸೆಸ್ ಬೆಂಗಳೂರು ಸ್ಪರ್ಧೆ ನಡೆದಾಗ ಅದರಲ್ಲಿ ಭಾಗವಹಿಸುವಂತೆ ಅನೇಕ ಆತ್ಮೀಯರು ಒತ್ತಾಯಿಸಿದ್ದರು. ಆ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಸ್ಥಾನ ಪಡೆದ ಬಳಿಕ ನನ್ನ ಆತ್ಮವಿಶ್ವಾಸ ಹೆಚ್ಚಾಯಿತು ಎಂದು ತಿಳಿಸಿದ್ದಾರೆ.

ಜೀ ಈವೆಂಟ್ ಸಂಸ್ಥೆಯವರು ಮಸ್ಕತ್‌ನಲ್ಲಿ ಮಿಸೆಸ್ ಏಷ್ಯಾ ಪೆಸಿಫಿಕ್ ಸ್ಪರ್ಧೆ ಏರ್ಪಡಿಸಿದ್ದನ್ನು ತಿಳಿದು ಅದರಲಿ ಭಾಗವಹಿಸಿದೆ. ಆರಂಭದಲ್ಲಿ ನಿಜಕ್ಕೂ ಅಳುಕು ಉಂಟಾಗಿತ್ತು. ಫೈನಲ್ ತಲುಪಿದಾಗ ಮಿಸೆಸ್ ಗ್ಲೋಬ್ ಗೌರವ ನೀಡಿ ಕ್ರೌನ್ ತೊಡಿಸಲಾಯಿತು. ಫೈನಲ್‌ನಲ್ಲಿ ಸಾಮಾನ್ಯ ಜ್ಞಾನ, ನಡಿಗೆ ಶೈಲಿ ಮತ್ತಿತರ ಸಂಗತಿಗಳನ್ನು ಪರಿಗಣಿಸಲಾಗುತ್ತದೆ. ಅಂತಿಮವಾಗಿ ಮಿಸೆಸ್ ಏಷ್ಯಾ ಪೆಸಿಫಿಕ್ ಗೌರವ ಲಭಿಸಿದಾಗ ಶ್ರಮ ಸಾರ್ಥಕ ಎನಿಸಿತ್ತು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net