ಆಹಾ! ರುಚಿ ರುಚಿ ಮಾಸ್ಕ್‌ ಪರೋಟಾ... ಸವಿಯಬೇಕಿದ್ದರೆ ಇಲ್ಲಿಗೆ ಬನ್ನಿ...

mask parota
Published on

ಮಧುರೈ: ಕರೊನಾ ವೈರಸ್‌ ಈ ದಿನಗಳಲ್ಲಿ ಎಲ್ಲೆಲ್ಲೂ ಮಾಸ್ಕ್‌ದ್ದೇ ಮಾತು. ಮಾಸ್ಕ್‌ ಧರಿಸಿ, ಸೇಫ್‌ ಆಗಿರಿ ಎಂದು ಪೊಲೀಸರು, ವೈದ್ಯರು, ಮಾಧ್ಯಮದವರು ಎಲ್ಲರೂ ದಿನನಿತ್ಯ ಹೇಳುತ್ತಲೇ ಇದ್ದಾರೆ.

ಈ ಮಾಸ್ಕ್‌ ಮಹತ್ವ ಎಷ್ಟು ಎಂದು ಸಾರಲು, ಇದರ ಬಗ್ಗೆ ಜಾಗೃತಿ ಮೂಡಿಲು ತಮಿಳುನಾಡಿನ ಮಧುರೈನ ಹೋಟೆಲ್‌ವೊಂದು ವಿನೂತನ ಹಾಗೂ ಅಷ್ಟೇ ಸೃಜನಶೀಲ ಎನ್ನುವಂಥ ದಾರಿ ಕಂಡುಹಿಡಿದಿದೆ. ಅದೇ ಮಾಸ್ಕ್‌ ಪರೋಟಾ.

'ಟೆಂಪಲ್ ಸಿಟಿ' ಎಂಬ ರೆಸ್ಟೋರೆಂಟ್ ಇಂಥದ್ದೊಂದು ವಿನೂತನ ಜಾಗೃತಿಗೆ ಮುಂದಾಗಿದೆ. ಈ ಮಾಸ್ಕ್‌ ಪರೋಟಾ ಇದೀಗ ಗ್ರಾಹಕರನ್ನು ಸಿಕ್ಕಾಪಟ್ಟೆ ಆಕರ್ಷಿಸುತ್ತಿದೆಯಂತೆ. ಕರೊನಾ ವೈರಸ್‌ನ ಈ ದಿನಗಳಲ್ಲಿ ಹೋಟೆಲ್‌ಗೆ ಬರುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಅಂಥದ್ದರಿಂದ ಮಾಸ್ಕ್‌ ಬಗ್ಗೆ ಜಾಗೃತಿಯೂ ಮೂಡಿಸಿದಂತಾಯಿತು, ಹೋಟೆಲ್‌ ವ್ಯಾಪಾರವೂ ಆಯಿತು ಎನ್ನುವುದು ಹೋಟೆಲ್‌ ಮಾಲೀಕರ ಅನಿಸಿಕೆ.

ಅಷ್ಟಕ್ಕೂ ಈ ಪರೋಟಾ ನೋಡಲು ಮಾತ್ರ ಡಿಫರೆಂಟ್‌ ಆಗಿರದೇ ರುಚಿಯೂ ಅಷ್ಟೇ ಚೆನ್ನಾಗಿದೆ ಎನ್ನುತ್ತಾರೆ ಇದನ್ನು ಸವಿದವರು. ಸಾರ್ವಜನಿಕವಾಗಿ ಮಾಸ್ಕ್‌ ಹೇಗೆ ಧರಿಸಬೇಕು ಎಂದು ಜನರಿಗೆ ನೆನಪಿಸುವ ಉದ್ದೇಶದಿಂದ ಇಂಥ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ ಮಾಲೀಕರು.

ಇದನ್ನು ಸವಿದ ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್‌ ಮಾಡಿದ್ದು, ಸಕತ್‌ ವೈರಲ್‌ ಆಗಿದೆ, ಜತೆಗೆ ಗ್ರಾಹಕರು ಇದನ್ನು ಕೊಳ್ಳಲು ಉತ್ಸುಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net