More

    ಅಗೆದಷ್ಟೂ, ಬಗೆದಷ್ಟೂ ಚಿನ್ನ, ವಜ್ರ,ಠೇವಣಿ- ನೀರವ್‌ ಮೋದಿಯ ಮತ್ತಷ್ಟು ಆಸ್ತಿ ಜಪ್ತಿ

    ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸುಮಾರು 14 ಸಾವಿರ ಕೋಟಿ ವಂಚಿಸಿ ಲಂಡನ್‌ನಲ್ಲಿ ಜೈಲು ಪಾಲಾಗಿರುವ ನೀರವ್‌ ಮೋದಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಕೂಡ ಮುಂದುವರೆಸಿದ್ದು, 329.66 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಫ್ಲ್ಯಾಟ್‌ಗಳು, ಫಾರ್ಮ್ ಹೌಸ್, ವಿಂಡ್ ಮಿಲ್, ಷೇರುಗಳು ಮತ್ತು ಬ್ಯಾಂಕ್ ಠೇವಣಿ ಎಲ್ಲವೂ ಒಳಗೊಂಡಂತೆ 329.66 ಕೋಟಿ ರೂಗಳನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಇಡಿ ತನ್ನ ಟ್ವಿಟರ್‌ನಲ್ಲಿ ಹೇಳಿದೆ.

    ಮುಂಬೈ ವಿಶೇಷ ನ್ಯಾಯಾಲಯ ಕಳೆದ ಕೆಲವು ದಿನಗಳ ಹಿಂದೆ ಜಾರಿ ನಿರ್ದೇಶನಾಲಯಕ್ಕೆ ನೀರವ್‌ ಮೋದಿಯವರ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶ ನೀಡಿತ್ತು. ಈ ತೀರ್ಪಿನ ಹಿನ್ನೆಲೆಯಲ್ಲಿ ಮುಟ್ಟುಗೋಲು ಪ್ರಕ್ರಿಯೆ ನಡೆಯುತ್ತಿದೆ.

    ಕಳೆದ ತಿಂಗಳಷ್ಟೇ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ 108 ಘಟಕಗಳಲ್ಲಿ ಪಾಲಿಶ್ ಮಾಡಿದ ವಜ್ರಗಳು, ಬೆಳ್ಳಿ ಆಭರಣಗಳು ಸೇರಿದಂತೆ 1,350 ಕೋಟಿ ರೂ.ಗಳ ಮೌಲ್ಯದ ಮುತ್ತುಗಳನ್ನು ಹಾಂಕಾಂಗ್‌ನಿಂದ ಭಾರತಕ್ಕೆ ಜಾರಿ ನಿರ್ದೇಶನಾಲಯ ತಂದಿತ್ತು. ಇವುಗಳಲ್ಲಿ ನಯಗೊಳಿಸಿದ ವಜ್ರಗಳು, ಮುತ್ತುಗಳು, ಮುತ್ತು ಮತ್ತು ಬೆಳ್ಳಿ ಆಭರಣಗಳು ಸೇರಿದ್ದವು. ಇವುಗಳನ್ನು ಹಾಂಕಾಂಗ್‌ನ ಲಾಜಿಸ್ಟಿಕ್ಸ್ ಕಂಪನಿಯ ಗೋಡೌನ್‌ನಲ್ಲಿ ಇರಿಸಲಾಗಿತ್ತು,

    ಕಾರು ಹತ್ತಿಸಿದ ತಪ್ಪಿಗೆ ರಕ್ತಸಿಕ್ತ ಬಾಲಕನನ್ನು ಚರಂಡಿಯಲ್ಲಿ ಎಸೆದು ಹೋದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts