ಮಾಸ್ಕ್​ ಕಾಮಣ್ಣನಿಗೆ ಹೋಳಿ ಪೂಜೆ; ದಹನವಾಗುತ್ತಿದ್ದಾಗಲೂ ಬಾಯಿ, ಮೂಗು ಮುಚ್ಚಿಕೊಂಡೇ ಇದ್ದ...!

Kamanna 10 March 20
Published on

ಧಾರವಾಡ: ಸೋಮವಾರ ನಡೆದ ಹೋಳಿ ಹಬ್ಬದಲ್ಲಿ ಕಾಮಣ್ಣನಿಗೂ ಫೇಸ್​ಮಾಸ್ಕ್ ಹಾಕಿ ಪೂಜೆ ಮಾಡಿದ ಘಟನೆ ವಿಜಯಾನಂದನಗರದಲ್ಲಿ ನಡೆದಿದೆ.

ವಿಜಯಾನಂದ ನಗರದ ಸರ್ಕಲ್‌ನಲ್ಲಿ ಈ ಮಾಸ್ಕ್​ ಕಾಮಣ್ಣನನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಇದನ್ನು ನೋಡಿ ಕಾಮಣ್ಣನಿಗೂ ಕೊರೊನಾ ಭೀತಿನಾ? ಎಂದು ಹುಬ್ಬೇರಿಸಬೇಡಿ.

ಈ ಹೋಳಿ ಕಾಮಣ್ಣ ಕೊರೊನಾ ಭಯದಿಂದ ಮಾಸ್ಕ್​ ಹಾಕಿಕೊಂಡಿದ್ದಲ್ಲ. ಬದಲಿಗೆ ಜನರಲ್ಲಿ ಸೋಂಕಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಾಕಿಕೊಂಡಿದ್ದ.

ವಿಜಯಾನಂದ ನಗರದ ಸರ್ಕಲ್​ನಲ್ಲಿ ಸ್ಥಳೀಯರು ಪ್ರತಿಷ್ಠಾಪಿಸಿದ್ದ ಹೋಳಿ ಕಾಮಣ್ಣನಿಗೆ ಮಾಸ್ಕ್​ ಹಾಕಿಯೇ ಪೂಜೆ ಮಾಡಿದರು. ಈಗ ಎಲ್ಲೆಡೆ ಕೊರೊನಾದ್ದೇ ಆತಂಕವಾಗಿದ್ದರಿಂದ ತಮ್ಮದೇ ವಿಭಿನ್ನ ಮಾರ್ಗದ ಮೂಲಕ ಜಾಗೃತಿ ಮೂಡಿಸಿದ್ದಾರೆ. ಮಾಸ್ಕ್​ ಹಾಕಿದ್ದಂತೆಯೇ ದಹನವನ್ನೂ ಮಾಡಿದ್ದಾರೆ. (ದಿಗ್ವಿಜಯ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net