ಮಾಸ್ಕ್​ ತಯಾರಿಸಿ ಉಚಿತವಾಗಿ ವಿತರಿಸುತ್ತಿರುವ 78 ವರ್ಷದ ವೃದ್ಧೆ

State Page 4
Published on

ಕುಮಟಾ: ಕರೊನಾ ಸೋಂಕು ಹರಡದಂತೆ 78 ವರ್ಷ ವಯಸ್ಸಿನ ವೃದ್ಧೆ ಲಕ್ಷ್ಮೀ ಭಟ್ಟ ತಾವೇ ಹೊಲಿದು ಮಾಸ್ಕ್ ಸಿದ್ಧಪಡಿಸಿ, ಜನರಿಗೆ ಉಚಿತವಾಗಿ ಹಂಚುವ ಮೂಲಕ ಪ್ರೇರಣೆ ಆಗಿದ್ದಾರೆ.

ಹೆರವಟ್ಟಾದ ರಾಘವೇಂದ್ರ ನಗರದ ನಿವಾಸಿ ಲಕ್ಷ್ಮೀ ಅವರು ವಯೋಸಹಜ ಸಮಸ್ಯೆಗಳ ನಡುವೆಯೂ ಕರೊನಾ ತಡೆಗೆ ಪಣತೊಟ್ಟಿದ್ದಾರೆ. ಹೊಲಿಗೆ ಹವ್ಯಾಸ ಇರುವ ಅವರು ಮನೆಗೆಲಸದ ಜತೆಗೆ ನೂರಾರು ಮಾಸ್ಕ್ ಸಿದ್ಧಪಡಿಸಿ ಸುತ್ತಮುತ್ತಲ ನಿವಾಸಿಗಳಿಗೆ ಅಗತ್ಯ ಉಳ್ಳವರಿಗೆ, ಮಾಸ್ಕ್ ಧರಿಸದೆ ಅಡ್ಡಾಡುವವರನ್ನು ಕಂಡರೆ ಉಚಿತವಾಗಿ ಕೊಟ್ಟು ಧರಿಸಲು ಹೇಳುತ್ತಾರೆ. ಇವರ ಕಾರ್ಯದಲ್ಲಿ ಪತಿ ನಿವೃತ್ತ ಶಿಕ್ಷಕ ಕೃಷ್ಣ ಭಟ್ಟ ಬೆನ್ನೆಲುಬಾಗಿದ್ದಾರೆ.

ಕರೊನಾದಿಂದ ದೇಶ ಆತಂಕದಲ್ಲಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಯಾರಾದರೂ ಮಾಸ್ಕ್ ಧರಿಸದೆ ಓಡಾಡುತ್ತಿರುವುದು ಗಮನಕ್ಕೆ ಬಂದರೆ ಅವರಿಗೆ ಮಾಸ್ಕ್ ಕೊಟ್ಟು ಕಳಿಸುವುದಕ್ಕಾಗಿಯೇ ಹೊಲಿಯತ್ತಿದ್ದೇನೆ ಎನ್ನುತ್ತಾರೆ ಲಕ್ಷ್ಮೀ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net