70ರ ದಶಕದಲ್ಲಿ 1 ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

Masale dose
Published on

ನವದೆಹಲಿ: ನಮ್ಮ ಕಾಲದಲ್ಲಿ 1 ರೂಪಾಯಿ ಕೊಟ್ಟರೆ ಏನೆಲ್ಲಾ ಬರ್ತಿತ್ತು ಗೊತ್ತಾ? ಆದರೆ, ಈ ಕಾಲದಲ್ಲಿ 100 ರೂಪಾಯಿಗೂ ಬೆಲೆಯಿಲ್ಲ ಎಂದು ಹಿರಿಯರು ಆಡುವ ಮಾತಗಳನ್ನು ಆಗಾಗ ನೀವು ಕೇಳಿರುತ್ತಿರಿ. ಏಕೆಂದರೆ, ಇಂದು ಎಲ್ಲ ವಸ್ತುಗಳ ಬೆಲೆ ದುಬಾರಿಯಾಗಿದೆ. ಬೆಳಗ್ಗಿನ ತಿಂಡಿ ಮಾಡಬೇಕೆಂದರೂ ನೂರು ಬಾರಿ ಯೋಚಿಸಬೇಕಾದ ಕಾಲ ಇದಾಗಿದೆ.

ಪ್ರಸ್ತುತ ಬೆಲೆ ಏರಿಕೆಯ ಬಗ್ಗೆ ದೇಶದಲ್ಲಿ ಭಾರಿ ಚರ್ಚೆಯಾಗುತ್ತಿರುವುದರ ನಡುವೆಯೇ 1971ನೇ ಇಸವಿಗೆ ಸಂಬಂಧಿಸಿದ ರೆಸ್ಟೋರೆಂಟ್​ ಒಂದರ ಬಿಲ್​ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದರಲ್ಲಿರುವ ಒಂದು ಮಸಾಲೆ ದೋಸೆ ಮತ್ತು ಕಾಫಿ ಬೆಲೆಯನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಅಂದು ಒಂದು ಮಸಾಲೆ ದೋಸೆ ಮತ್ತು ಕಾಫಿಗೆ ಕೇವಲ 2 ರೂಪಾಯಿ ಮಾತ್ರ. ಇಂದು ಯಾವುದೇ ಉತ್ತಮ ಸೌಲಭ್ಯವುಳ್ಳ ರೆಸ್ಟೋರೆಂಟ್​ನಲ್ಲಿ ಮಸಾಲೆ ದೋಸೆ ಮತ್ತು ಕಾಫಿಯನ್ನು ಆರ್ಡರ್​ ಮಾಡಿದರೆ ಕನಿಷ್ಠ 500 ರಿಂದ 800 ರೂಪಾಯಿ ಬಿಲ್​ ಆಗುತ್ತದೆ. ಸಾಮಾನ್ಯ ಹೋಟೆಲ್​ಗಳಲ್ಲಿ ಮಸಾಲೆ ದೋಸೆಗೆ 50 ರಿಂದ 100 ರೂ. ವರೆಗೂ ಬಿಲ್​ ಆಗುತ್ತದೆ.

51 ವರ್ಷದ ಹಿಂದಿನ ರೆಸ್ಟೋರೆಂಟ್​ ಬಿಲ್​ ಇದಾಗಿದೆ. ದೆಹಲಿಯ ಮೋತಿ ಮಹಲ್​ ರೆಸ್ಟೋರೆಂಟ್​ಗೆ ಸಂಬಂಧಿಸಿದ್ದು, ಇಂಡಿಯನ್​ ಹಿಸ್ಟರಿ ವಿಥ್​ ವಿಷ್ಣು ಶರ್ಮಾ ಹೆಸರಿನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ. 1927ರ ಜೂನ್​ 28ರಲ್ಲಿ ಬಿಲ್​ ಮಾಡಲಾಗಿದ್ದು, ಮಸಾಲೆ ದೋಸೆ ಮತ್ತು ಕಾಫಿಗೆ ತಲಾ ಒಂದು ರೂಪಾಯಿ ಚಾರ್ಜ್​ ಮಾಡಲಾಗಿದೆ.

ಬಿಲ್​ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ. ಈ ಬಿಲ್​ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ತಿಳಿಸಲು ನಮಗೆ ಕಾಮೆಂಟ್​ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net