

ಸಿಡ್ನಿ: ಪ್ರೇಯಸಿಯಿಂದ ಪಬ್ಲಿಕ್ ಪಾರ್ಕ್ನಲ್ಲಿ ಕಪಾಳಮೋಕ್ಷ ಮಾಡಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ತೀವ್ರ ಮುಜುಗರಕ್ಕೀಡಾಗಿರುವ ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕೆಲ್ ಕ್ಲಾರ್ಕ್, ಸದ್ಯ ಡ್ಯಾಮೇಜ್ ಕಂಟ್ರೋಲ್ನಲ್ಲಿ ಮುಳುಗಿದ್ದಾರೆ.
ಮೇಲಿನ ಅಂಗಿ ಇಲ್ಲದೆ, ಕೇವಲ ಶಾರ್ಟ್ಸ್ನಲ್ಲಿರುವ ಕ್ಲಾರ್ಕ್, ಕೂಗುತ್ತಾ ಬರುತ್ತಿರುವುದು ಮತ್ತು ಅವರ ಪ್ರೇಯಸಿ ಜೇಡ್ ಯಾರ್ಬ್ರೋ ಅವರು ಕ್ಲಾರ್ಕ್ ಕೆನ್ನೆಗೆ ಬಾರಿಸಿರುವ ದೃಶ್ಯ ವಿಡಿಯೋದಲ್ಲಿದೆ. ಮೂಲಗಳ ಪ್ರಕಾರ ಮಾಜಿ ಪ್ರೇಯಸಿ ಪಿಪ್ ಎಡ್ವರ್ಡ್ ಜೊತೆ ಕ್ಲಾರ್ಕ್ ಸಿಕ್ಕಿಬಿದ್ದಿದ್ದೇ ಹಾಲಿ ಪ್ರೇಯಸಿಯ ಕಪಾಳಮೋಕ್ಷಕ್ಕೆ ಕಾರಣ ಎಂದು ತಿಳಿದುಬಂದಿದೆ.
ನಾನು ಎಲ್ಲವನ್ನು ನೋಡಿದ್ದೇನೆ. ನಾನು ಏನು ತಪ್ಪು ಮಾಡಿದೆ? ಎಂದು ಪ್ರಶ್ನಿಸುವ ಮೂಲಕ ಜೇಡ್ ಅವರು ಕ್ಲಾರ್ಕ್ ಅವರನ್ನು ನಿಂದಿಸುತ್ತಿರುವುದು ವಿಡಿಯೋದಲ್ಲಿದೆ. ಆದಾಗ್ಯೂ ಕ್ಲಾರ್ಕ್, ಜೇಡ್ ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಾರೆ. ಬೇಬಿ ನಿನ್ನದು ತಪ್ಪು ಎಂದು ಹೇಳುತ್ತಾರೆ.
ಅಂದಹಾಗೆ ಈ ಘಟನೆ ಜನವರಿ 10ರಂದು ನಡೆದಿದೆ. ಕೆಲವು ದಿನಗಳ ಹಿಂದೆ ವಿಡಿಯೋ ಸೋರಿಕೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಬಳಿಕ ಕ್ಲಾರ್ಕ್ ಆಗಲಿ ಅಥವಾ ಜೇಡ್ ಆಗಲಿ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ವಿಡಿಯೋ ವೈರಲ್ ಆದ ಮೇಲೆ ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಲ್ಲ. ಕ್ಲಾರ್ಕ್ ಅವರ ಮಾಜಿ ಪ್ರೇಯಸಿ ಎಡ್ವರ್ಡ್ ವಿವಾದದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಅಂದಹಾಗೆ ಕ್ಲಾರ್ಕ್ ಅವರು ಮಾಜಿ ಮಾಡೆಲ್ ಹಾಗೂ ಪತ್ನಿ ಕೈಲೈ ಅವರಿಂದ ದೂರವಾದ ಬಳಿಕ ಎಡ್ವರ್ಡ್ ಜೊತೆ ಸಂಬಂಧದಲ್ಲಿದ್ದರು. ಇಬ್ಬರಿಂದ ದೂರಾದ ಬಳಿಕ ಜೇಡ್ ಅವರೊಂದಿಗೆ ಕ್ಲಾರ್ಕ್ ಸಂಬಂಧದಲ್ಲಿದ್ದರು. ಇದೀಗ ಜೇಡ್ಗೆ ಗೊತ್ತಿಲ್ಲದಂತೆ ಮಾಜಿ ಪ್ರೇಯಸಿ ಎಡ್ವರ್ಡ್ ಜೊತೆ ಇದ್ದಾಗ ಕ್ಲಾರ್ಕ್ ಸಿಕ್ಕಿಬಿದ್ದಿದ್ದು, ಹಾಲಿ ಪ್ರೇಯಸಿ ಜೇಡ್ ಕೈಯಿಂದ ಕಪಾಳಕ್ಕೆ ಏಟು ತಿಂದಿದ್ದಾರೆ. (ಏಜೆನ್ಸೀಸ್)