

ಮಾರ್ಟಿನ್ ಚಿತ್ರಕ್ಕೆ ಬೇರೆ ಭಾಷೆಗಳಿಗಿಂತ ಕನ್ನಡದಲ್ಲೇ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ಬಿಡುಗಡೆಗೂ ಮುನ್ನ ಅದೆಷ್ಟು ಪಾಪ್ಯುಲ್ಯಾರಿಟಿ ಗಿಟ್ಟಿಸಿಕೊಂಡಿತ್ತೋ ಅದಕ್ಕಿಂತಲೂ ದುಪ್ಪಟ್ಟು ಹಣವನ್ನು ಬಾಕ್ಸಾಫೀಸ್‌ನಲ್ಲಿ ಗಳಿಸಿದೆ.
ವಿತರಕರ ಪ್ರಕಾರ ಕರ್ನಾಟಕದಲ್ಲಿ ನಿನ್ನೆ ಅಕ್ಟೋಬರ್ (13)ರಂದು 4 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಅಂದಾಜಿಸಲಾಗಿದೆ. ಅದೇ ಇಂಡಸ್ಟ್ರಿ ಟ್ರ್ಯಾಕರ್ Scnilk ಪ್ರಕಾರ 3.25 ಕೋಟಿ ರೂಪಾಯಿ (Early Estimates) ಕಲೆಕ್ಷನ್ ಆಗಿದೆ ಎನ್ನಲಾಗಿದೆ.
3 ದಿನಗಳ ಮಾರ್ಟಿನ್ ಗಳಿಕೆ ಎಷ್ಟು?
ಮೊದಲ ಮೂರು ದಿನಗಳಲ್ಲಿ 'ಮಾರ್ಟಿನ್' 15.45 ಕೋಟಿ ರೂಪಾಯಿಯಿಂದ 17 ಕೋಟಿ ರೂಪಾಯಿ ಆಸು ಪಾಸಿನಲ್ಲಿ ಗಳಿಕೆ ಕಂಡಿರುಬಹುದು ಅನ್ನೋದು Scnilk ರಿಪೋರ್ಟ್ ಆಗಿದೆ.
ಮೊದಲ ದಿನ 6.7 ಕೋಟಿ ರೂ. ಎರಡನೇ ದಿನ 5.5 ಕೋಟಿ ರೂ. ಮೂರನೇ ದಿನ 3.25 ಕೋಟಿ ರೂ. (ವಿತರಕರ ಲೆಕ್ಕದ 5 ಕೋಟಿ ರೂ.) ಒಟ್ಟು 15.45 to 17.2 ಕೋಟಿ ರೂ.
ಬೇರೆ ಭಾಷೆಯಲ್ಲಿ ಹೇಗಿದೆ ರೆಸ್ಪಾನ್ಸ್?
ಕನ್ನಡದಲ್ಲಿ ಮೊದಲ ಮೂರು ದಿನ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹಾಗೇ ಉಳಿದ ಭಾಷೆಯಲ್ಲಿ ಅದ್ಭುತ ರೆಸ್ಪಾನ್ಸ್ ಸಿಕ್ಕಿಲ್ಲ. ಇಂದಿನಿಂದ (ಅಕ್ಟೋಬರ್ 14) 'ಮಾರ್ಟಿನ್' ಬೇರೆ ಭಾಷೆಗಳಲ್ಲೂ ಉತ್ತಮ ಕಲೆಕ್ಷನ್ ಕಾಣಬಹುದು ಎನ್ನಲಾಗಿದೆ. ಮೂರು ದಿನಗಳಲ್ಲಿ ಹಿಂದಿಯಲ್ಲಿ 75 ಲಕ್ಷ ರೂಪಾಯಿ, ತೆಲುಗಿನಲ್ಲಿ 1 ಕೋಟಿ ರೂ. ಕಲೆಕ್ಷನ್ ಆಗಿದೆ.