ಫೇಸ್​ಬುಕ್​ ಲೈವ್​ನಲ್ಲಿಯೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ, ಗೆಳತಿ ಎಸಗಿದ್ದ ಅತ್ಯಾಚಾರ ಆರೊಪದಿಂದಾಗಿ ನೊಂದಿದ್ದ ಮನೀಶ್..!

maha
Published on

ಮಹಾರಾಷ್ಟ್ರ: ಗೆಳತಿ ಅತ್ಯಾಚಾರ ಆರೋಪ ಮಾಡಿದಳೆಂದು ಪ್ರಿಯಕರನೊಬ್ಬ ಫೇಸ್​ಬುಕ್​ ಲೈವ್​ನಲ್ಲಿಯೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.


9 ವರ್ಷದ ಕಾಜಲ್ ಎಂಬುವವಳನ್ನು ಪ್ರೀತಿ ಮಾಡುತ್ತಿದ್ದ 38 ವರ್ಷದ ಮನೀಶ್​​​, 19 ವರ್ಷದ ಕಾಜಲ್ ಎಂಬುವವಳನ್ನು ಪ್ರೀತಿ ಮಾಡುತ್ತಿದ್ದ. ಸ್ವಲ್ಪ ದಿನ ಕಳೆದ ನಂತರ ಆಕೆ ಆತನ ಮೇಲೆ ಅತ್ಯಾಚಾರ ಆರೋಪ ಮಾಡಿ ತನ್ನ ಕುಟುಂಬದವರ ಜತೆ ಸೇರಿ ಬ್ಲ್ಯಾಕ್ ಮೇಲೆ ಮಾಡಲು ಆರಂಭಿಸಿದ್ದಳು.


ಮನೀಶ್ ಮನನೊಂದು ಸೆಪ್ಟೆಂಬರ್ 10 ರಂದು ಫೇಸ್​ಬುಕ್ ಲೈವ್​​​​ನಲ್ಲಿ ತನ್ನ ಗೆಳತಿ ಹಾಗೂ ಆಕೆಯ ಕುಟುಂಬದವರು ತನ್ನ ಮೇಲೆ ಅತ್ಯಾಚಾರ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾನೆ, ಮತ್ತವರ ಕುಟುಂಬದವರು 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು, ಹಣವನ್ನು ನೀಡಲು ವಿಫಲವಾದರೆ ಆತನ ವಿರುದ್ಧ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಆತ ಹೇಳಿದ್ದಾನೆ.


ಸೆಪ್ಟೆಂಬರ್ 6 ರಂದು, ಯುವತಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಾಳೆ ಮತ್ತು ಆಕೆಯ ಕುಟುಂಬ ಸದಸ್ಯರು ಮನೀಷ್ ಜೊತೆ ಓಡಿ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.


ಮೂರು ಮಕ್ಕಳ ತಂದೆಯಾಗಿರುವ 38 ವರ್ಷದ ವ್ಯಕ್ತಿ ಕಿರುಕುಳ ತಾಳಲಾರದೆ ನಾಗಪುರದಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೀಶ್ ತಾನು ಕಾಜಲ್ ಜೊತೆಗೆ ದೈಹಿಕ ಸಂಪರ್ಕ ಹೊಂದಿರಲಿಲ್ಲ ಎಂದು ಫೇಸ್​​​ಬುಕ್​​ ಲೈವ್​ನಲ್ಲಿ ಹೇಳಿದ್ದಾನೆ.


ಫೇಸ್‌ಬುಕ್ ಲೈವ್ ವಿಡಿಯೋ ಹೊರಬಿದ್ದ ನಂತರ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.ವ್ಯಕ್ತಿಯ ಶವವನ್ನು ನದಿಯಿಂದ ವಶಪಡಿಸಿಕೊಳ್ಳಲಾಗಿದ್ದು, ನಾಗಪುರದ ಕಲಮನ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net