ರಸ್ತೆಯಲ್ಲಿ ಕಸ ಸುರಿದು ಮದುವೆ ಮೆರವಣಿಗೆ! ವಿಎಂಸಿಯಿಂದ ಬಿತ್ತು 2,500ರೂ ದಂಡ..Vadodar

Vadodara
Published on

Vadodar: ಸ್ವಚ್ಛಗೊಳಿಸಿದ ರಸ್ತೆಯಲ್ಲಿ ಕಸ ಹರಡಿದ್ದಕ್ಕಾಗಿ ಮದುವೆ ಮೆರವಣಿಗೆಗೆ ಮುನ್ಸಿಪಲ್​​ ಕಾರ್ಪೊರೇಷನ್ 2,500 ರೂ. ದಂಡ ವಿಧಿಸಿದ ಘಟನೆ ವಡೋದರಾದಲ್ಲಿ ಗುರುವಾರ (ಮೇ.1) ನಡೆದಿದೆ.

ಅಜ್ಞಾ ರಸ್ತೆಯನ್ನು ಸ್ವಚ್ಛತಾ ಕಾರ್ಯಕರ್ತರು ಸ್ವಚ್ಛಗೊಳಿಸಿದ ಕೆಲವೇ ಗಂಟೆಗಳ ನಂತರ, ಮಧ್ಯಾಹ್ನ ನಡೆದ ಅದ್ಧೂರಿ ಮದುವೆ ಮೆರವಣಿಗೆಯಲ್ಲಿ ವ್ಯಾಪಕವಾಗಿ ಕಾನ್ಸೆಟ್ಟಿ ಮತ್ತು ಪಟಾಕಿಗಳನ್ನು ಸಿಡಿಸಿ ರಸ್ತೆಯಲ್ಲಿ ಕಸದ ರಾಶಿ ಹಾಕಿದ್ದ ಮದುವೆ ಮೆರವಣಿಗೆಯೊಂದರ ಮೇಲೆ ಮುನ್ಸಿಪಲ್ ಕಾರ್ಪೊರೇಷನ್ ದಂಡ ವಿಧಿಸಿದೆ.

ವಡೋದರಾದಲ್ಲಿ ಮದುಮಗನೊಬ್ಬನು ತನ್ನ ಮದುವೆ ಮೆರವಣಿಗೆಯನ್ನು ಆಡಂಬರ ಮತ್ತು ಅದ್ಧೂರಿ ಪ್ರದರ್ಶನಗಳೊಂದಿಗೆ ಮದುವೆ ಮಂಟಪಕ್ಕೆ ಹೋಗಲು ತಯಾರಿ ನಡೆಸಿದ್ದನು. ಆದರೆ ಆ ಮೆರವಣಿಗೆಯ ವೇಳೆ ರಸ್ತೆಯಲ್ಲಿ ಹರಡಿದ ಕಸದಿಂದಾಗಿ ಮಹಾನಗರ ಪಾಲಿಕೆಗೆ ದಂಡ 2,500 ರೂ. ಕಟ್ಟಬೇಕಾಯಿತು.

ಮದುವೆ ಮೆರವಣಿಗೆಯಲ್ಲಿ ಬಳಸಿದ ಪಟಾಕಿಗಳ ಕಸದಿಂದಾಗಿ ರಸ್ತೆ ಸಂಪೂರ್ಣವಾಗಿ ಕೊಳಕಾಗಿದೆ, ನಾವು ತಕ್ಷಣ ತನಿಖೆ ನಡೆಸಿದಾಗ ವರನ ಸಂಬಂಧಿಯೊಬ್ಬರು ಕಸ ಹರಡುತ್ತಿದ್ದಾರೆಂದು ತಿಳಿದುಬಂದಿದೆ . ನಾವು ಸಂಬಂಧಿಗೆ 2,500 ರೂ. ದಂಡ ವಿಧಿಸಿದೆವು. ಕುಟುಂಬವು ತಮ್ಮ ತಪ್ಪನ್ನು ಒಪ್ಪಿಕೊಂಡು ದಂಡವನ್ನು ಪಾವತಿಸಲು ಒಪ್ಪಿಕೊಂಡಿತು. ದಂಡ ವಿಧಿಸಿದ ನಂತರ ವಡೋದರಾ ಪುರಸಭೆಯು ಕಸವನ್ನು ಸ್ವಚ್ಛಗೊಳಿಸಲು ಮತ್ತೆ ನೈರ್ಮಲ್ಯ ಕಾರ್ಮಿಕರನ್ನು ನಿಯೋಜಿಸಲಾಯಿತು ಎಂದು ವಡೋದರಾ ಮಹಾನಗರ ಪಾಲಿಕೆಯ ಉಪ ನಗರ ಆಯುಕ್ತ ಸುರೇಶ್ ತುನ್ವರ್ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net