

marriage pressure : ಮದುವೆಯಾಗುವಂತೆ ಒತ್ತಡ ಪದೇ ಪದೇ ಹೇರುತ್ತಿದ್ದರಿಂದ ಬೇಸತ್ತ ಗೆಳೆಯನೊಬ್ಬ ಅವಳನ್ನು ಕೊಲೆ ಮಾಡಿ, ಅವಳ ದೇಹವನ್ನು ಏಳು ತುಂಡುಗಳಾಗಿ ಕತ್ತರಿಸಿ, ಚೀಲಗಳಲ್ಲಿ ಹಾಕಿ ಬಾವಿಗೆ ಎಸೆದಿದ್ದಾನೆ. ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಝಾನ್ಸಿ ಜಿಲ್ಲೆಯ ಕಿಶೋರ್‌ಪುರ ಗ್ರಾಮದ ಮಾಜಿ ಸರಪಂಚ್ ( A sarpanch is the elected head of a Gram Panchayat, the village-level self-government institution in India) ಸಂಜಯ್ ಪಟೇಲ್, ರಚನಾ ಯಾದವ್ ಎಂಬ ವಿಧವೆಯೊಂದಿಗೆ ಸಂಬಂಧ ಹೊಂದಿದ್ದ. ಸ್ವಲ್ಪ ಸಮಯದವರೆಗೆ ಮದುವೆಯಾಗುವಂತೆ ಮಹಿಳೆ ಒತ್ತಡ ಹೇರಿದ್ದರಿಂದ ಬೇಸತ್ತ ಸಂಜಯ್ ಆಕೆಯನ್ನು ದೂರವಿಡಲು ನಿರ್ಧರಿಸಿದ. ಈ ಪಿತೂರಿಯಲ್ಲಿ ತನ್ನ ಸೋದರಳಿಯ ಸಂದೀಪ್ ಪಟೇಲ್ ಮತ್ತು ಇನ್ನೊಬ್ಬ ವ್ಯಕ್ತಿ ಪ್ರದೀಪ್ ಅಹಿರ್ವಾರ್ ಅವರನ್ನು ಸಹ ಸೇರಿಸಿಕೊಂಡರು.
ಈ ಮೂವರೂ ಸೇರಿ ಆಗಸ್ಟ್ 8 ರಂದು ರಚನಾಳನ್ನು ಕಾರಿನಲ್ಲಿ ಕತ್ತು ಹಿಸುಕಿ ಕ್ರೂರವಾಗಿ ಕೊಂದು, ಕೊಡಲಿಯಿಂದ ಆಕೆಯ ದೇಹವನ್ನು ತುಂಡು ಮಾಡಿ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದಾರೆ. ಆಕೆಯ ದೇಹವನ್ನು ಏಳು ತುಂಡುಗಳಾಗಿ ಕತ್ತರಿಸಿ, ಚೀಲಗಳಲ್ಲಿ ತುಂಬಿಸಿ ಹೊಲದಲ್ಲಿರುವ ಬಾವಿಗೆ ಎಸೆದರು. ಯಾವುದೇ ಪುರಾವೆಗಳು ಉಳಿಯದಂತೆ ಪ್ಲ್ಯಾನ್ ಮಾಡಿದ್ದಾರೆ. ದೇಹ ಮತ್ತು ತೋಳುಗಳನ್ನು ಕಿಶೋರ್ಪುರದ ಬಾವಿಯಲ್ಲಿ ಎಸೆದು, ತಲೆ ಮತ್ತು ಕಾಲುಗಳನ್ನು ಹತ್ತಿರದ ರೈವನ್ ನದಿಗೆ ಎಸೆದಿದ್ದಾರೆ.
ಆಗಸ್ಟ್ 13 ರಂದು ಬಾವಿಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ. ಪೊಲೀಸರು ಅಲ್ಲಿಗೆ ತಲುಪಿ ಬಾವಿಯಲ್ಲಿ ತೇಲುತ್ತಿದ್ದ ಎರಡು ಚೀಲಗಳನ್ನು ವಶಪಡಿಸಿಕೊಂಡರು. ಅದರಲ್ಲಿ ಮಾನವ ದೇಹದ ಭಾಗಗಳು ಇದ್ದವು. ಆಗಸ್ಟ್ 17 ರಂದು,ಕೈಗಳು ಅದೇ ಬಾವಿಯಿಂದ ಪತ್ತೆಯಾಗಿದ್ದವು, ಆದರೆ ತಲೆ ಮತ್ತು ಕಾಲುಗಳು ಕಾಣೆಯಾಗಿದ್ದವು. ಮರಣೋತ್ತರ ಪರೀಕ್ಷೆಯ ನಂತರ, ಆಗಸ್ಟ್ 18 ರಂದು ಶವವನ್ನು ದಹನ ಮಾಡಲಾಯಿತು. ಇತ್ತ ಮಾಹೆವಾ ಗ್ರಾಮದ ರಚನಾ ಯಾದವ್ (35) ಹಲವು ದಿನಗಳಿಂದ ಕಾಣೆಯಾಗಿದ್ದಾಳೆಂದು ಪೊಲೀಸರಿಗೆ ತಿಳಿದುಬಂದಿತ್ತು. ಈ ಕೊಲೆಯಾದ ಮಹಿಳೆ ಈಕೆ ಎಂದು ತಿಳಿದ ಪೊಲೀಸರು ವಿಚಾರಣೆ ಹಿನ್ನಲೇ ಮಹಿಳೆಯ ಕುರಿತಾಗಿ ಮಾಹಿತಿ ಕಲೆ ಹಾಕಿದ್ದಾರೆ. ಪತಿಯ ಮರಣದ ನಂತರ ಆಕೆಗೆ ಸಂಜಯ್ ಪಟೇಲ್ ಜೊತೆ ಸಂಬಂಧವಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ತನಿಖೆಯ ಭಾಗವಾಗಿ, 200 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಯಿತು. ಅಂತಿಮವಾಗಿ, ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಯಿತು. ಪೊಲೀಸರು ಸಂಜಯ್ ಪಟೇಲ್ ಮತ್ತು ಸಂದೀಪ್ ಪಟೇಲ್ ಅವರನ್ನು ಬಂಧಿಸಿದ್ದಾರೆ, ಆದರೆ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ 25,000 ರೂ. ಬಹುಮಾನ ಘೋಷಿಸಲಾಗಿದೆ. ಇತ್ತೀಚೆಗೆ ಮದುವೆಯಾಗುವಂತೆ ಒತ್ತಡ ಬಂದ ಕಾರಣ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ನೀಡಿದ ಮಾಹಿತಿಯ ಆಧಾರದ ಮೇಲೆ, ರಚನಾ ಯಾದವ್ ಅವರ ತಲೆ ಮತ್ತು ಕಾಲುಗಳನ್ನು ಲಖೇರಿ ನದಿಯಿಂದ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಎಂಟು ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ.