ಬೆಂಗಳೂರು: ‘ಅಧಿಪತ್ರ’ ಮೂಲಕ ಕ್ರೈಮ್ ಸಸ್ಪೆನ್ಸ್ ಕಥೆ ಹೇಳಿದ್ದ ಚಯನ್ ಶೆಟ್ಟಿ ಇದೀಗ ‘ಮ್ಯಾರೇಜ್ ಪಾರ್ಟಿ’ ಚಿತ್ರದ ಶೂಟಿಂಗ್ ನ್ನು ಸದ್ದಿಲದೇ ಪೂರ್ಣಗೊಳಿಸಿದ್ದಾರೆ.ಸದ್ಯ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಬಿರುಸುಗೊಂಡಿದ್ದು, ಅಕ್ಟೋಬರ್ ಇಲ್ಲವೇ ನವೆಂಬರ್‌ಗೆ ತೆರೆ ಬರಲು ಸಿದ್ಧತೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಚಿತ್ರದ ಬಗ್ಗೆ ನಿರ್ದೇಶಕ ಚಯನ್ ಶೆಟ್ಟಿ, ‘ಸಿನಿಮಾದ ಶೂಟಿಂಗ್ ಪೂರ್ಣಗೊಂಡ ಹಿನ್ನೆಲೆಯಲ್ಲಿ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ. ಕುಂದಾಪುರ, ಕೊಲ್ಲೂರು ಸುತ್ತಮುತ್ತ 60 ದಿನಗಳ ಕಾಲ ಶೂಟಿಂಗ್ ಮಅಡಿದ್ದೇವೆ. ಮನೆಯಲ್ಲಿ ಮದುವೆ ಫಿಕ್ಸ್ ಆದಾಗ ಯಾವೆಲ್ಲ ರೀತಿಯಲ್ಲಿ ಘಟನೆಗಳು ನಡೆಯುತ್ತವೆ ಎಂಬುದನ್ನು ಸಸ್ಪೆನ್ಸ್-ಥ್ರಿಲ್ಲರ್ ಮೂಲಕ ನಗಿಸುವ ಪ್ರಯತ್ನ ಇದು. ನನ್ನ ನಿರ್ದೇಶನದ ಮೊದಲ ಸಿನಿಮಾ ‘ಆಧಿಪತ್ರ’ ಕ್ರೈಂ-ಸಸ್ಪೆನ್ಸ್ ಆಗಿತ್ತು. ಆದರೆ, ‘ಮ್ಯಾರೇಜ್ ಪಾರ್ಟಿ’ ಬಹುತೇಕ ನಗಿಸುತ್ತದೆ. ಪ್ರೇಕ್ಷಕರು ಹೆಚ್ಚು ಎಂಟರ್‌ಟೈನ್‌ಮೆಂಟ್ ಬಯಸುತ್ತಾರೆ. ಹಾಗಾಗಿ, ಈ ಪ್ರಯತ್ನ. ಜನರನ್ನು ನಗಿಸುವುದು ಸುಲಭವಲ್ಲ, ಅದೊಂದು ಸವಾಲು. ಅದನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದೇವೆ. ಈ ಚಿತ್ರಕ್ಕೆ ಹೊಸ ಕಲಾವಿದರ ಅಗತ್ಯವಿತ್ತು. ಹಾಗಾಗಿ, ಕೆಲ ತುಳು-ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ವಿನೀಶ್ ಕುಮಾರ್ ಆಯ್ಕೆ ಸೂಕ್ತ ಅನಿಸಿತು. ಬಹುತೇಕ ಇದು ಕರಾವಳಿ ಶೈಲಿಯಲ್ಲಿದ್ದು, ತುಳು ಕಲಾವಿದರು ಅಭಿನಯಿಸಿದ್ದಾರೆ’ ಎಂದು ಮಾಹಿತಿ ನೀಡಿದರು. ವಿನೀತ್ ಜತೆಗೆ ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ.ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್ ಕಲಾಬಳಗದಲ್ಲಿದ್ದಾರೆ. ಕನ್ನಡ ಮತ್ತು ಮಲಯಾಳಂ ಎರಡು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದೆ.