ಪ್ರೇತದೊಂದಿಗೆ ವಿವಾಹ! ಈ ವಿಚಿತ್ರ ಪದ್ಧತಿ ಎಲ್ಲಿ, ಹೇಗೆ ನಡೆಯುತ್ತೆ ಗೊತ್ತೆ?; ಇಲ್ಲಿದೆ ಮಾಹಿತಿ.. | Marriage Ghost

dk - 2025-04-06T180615.352
Published on

Marriage Ghost : ಮದುವೆ ಎಂದರೆ ಕೇವಲ ಎರಡು ಹೃದಯಗಳ ಮಿಲನವಲ್ಲ. ಬದಲಾಗಿ ಎರಡು ಮನಸ್ಸುಗಳ ಮತ್ತು ಕುಟುಂಬಗಳ ಮಿಲನ ಆಗುತ್ತೆ. ಒಬ್ಬ ಹುಡುಗ ಮತ್ತು ಹುಡುಗಿ ಮದುವೆಯ ಬಗ್ಗೆ ಹಲವಾರು ಕನಸುಗಳನ್ನು ಹೊಂದಿರುತ್ತಾರೆ, ಅವುಗಳನ್ನು ಅವರು ಒಟ್ಟಿಗೆ ನನಸಾಗಿಸಲು ಬಯಸುತ್ತಾರೆ. ಭಾರತದಲ್ಲಿ ವಿವಾಹಗಳನ್ನು ಹಲವು ವಿಧಗಳಲ್ಲಿ ನಡೆಸಲಾಗುತ್ತದೆ.

ಇದೇ ರೀತಿ ವಿವಿಧ ದೇಶಗಳಲ್ಲಿ ವಿವಾಹಗಳು ಜರಗುತ್ತವೆ. ಅಂದಹಾಗೆ ವಿದೇಶಗಳಲ್ಲಿ ಕೂಡ ವಿವಾಹಕ್ಕೆ ಸಂಬಂಧಿಸಿದ ವಿಭಿನ್ನ ಆಚರಣೆಗಳು ಮತ್ತು ಪದ್ಧತಿಗಳನ್ನು ಆಚರಿಸಲಾಗುತ್ತದೆ. ಆದರೆ, ಶವದ ಜತೆ ಮದುವೆ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?

ಹೌದು, ಇದು ನಿಜ. ಚೀನಾ ಒಂದು ದೇಶ, ಅಲ್ಲಿ ಜನರು ಮೃತ ದೇಹಗಳನ್ನು ಸಹ ಮದುವೆಯಾಗುತ್ತಾರೆ. ಇದನ್ನು ಪ್ರೇತ ವಿವಾಹ ಎಂದು ಕರೆಯಲಾಗುತ್ತದೆ. ಇದು ಏನು? ಎಲ್ಲಿ? ಏಕೆ ಎಂದು ತಿಳಿಯೋಣ..

ಸತ್ತವರನ್ನು ಮದುವೆಯಾಗುವ ಪದ್ಧತಿ ಚೀನಾದಲ್ಲಿ ನಡೆಯುತ್ತದೆ. ಅಲ್ಲದೆ, ಪ್ರಪಂಚದಲ್ಲಿ ಇಂತಹ ವಿಚಿತ್ರ ಆಚರಣೆ ನಡೆಯುವುದು ಇದೇ ದೇಶದಲ್ಲಿ ಮಾತ್ರ. ಇನ್ನು ಈ ಪದ್ಧತಿಯೂ ಚೀನಾದಲ್ಲಿ 3000 ವರ್ಷಗಳ ಹಳೆಯ ಸಂಪ್ರದಾಯಕ ಪದ್ಧತಿಯಾಗಿದ್ದು, ಇಂದಿಗೂ ಕೇಲವು ಭಾಗಗಳಲ್ಲಿ ಆಚಣೆಯಲ್ಲಿದೆ. ಇಲ್ಲಿನ ಪ್ರಕಾರ, ಸತ್ತವರ ದೇಹದೊಂದಿಗೆ ಮದುವೆಯಾಗುವುದರಿಂದ ಅವಿವಾಹಿತರು ಒಂಟಿತನ ಅನುಭವಿಸುದಿಲ್ಲ ಎಂದು ಇಲ್ಲಿನ ಜನರ ನಂಬಿಕೆಯಾಗಿದೆ. ಈ ಪದ್ಧತಿಯಲ್ಲಿ ಜೀವಂತ ಜನರು ಸತ್ತ ದೇಹದೊಂದಿಗೆ ವಿವಾಹವನ್ನು ಮಾಡಲಾಗುತ್ತದೆ.

ವಿಚಿತ್ರ ಪದ್ಧತಿ ಆಚರಣೆ ಹೇಗೆ..?

ಈ ಭಯಾನಕ ವಿವಾಹದಲ್ಲಿ, ಅವಿವಾಹಿತ ಹುಡುಗ ಅಥವಾ ಹುಡುಗಿಯ ಮೃತ ದೇಹವನ್ನು ಸ್ಮಶಾನದಿಂದ ವಿವಾಹ ಸ್ಥಳಕ್ಕೆ ತರಲಾಗುತ್ತದೆ. ಅಲ್ಲಿ, ಅವಳು ವಧೂವರರಂತೆ ಸಿಂಗರಿಸಲ್ಪಟ್ಟಿದ್ದಾಳೆ ಮತ್ತು ಅವಳ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದೆ.

ಈ ಪದ್ಧತಿಯೂ ತೀರ ಹಿಂದುಳಿದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಒಬ್ಬ ಹುಡುಗನ ಮರಣದ ನಂತರ ಅವನ ಸಮಾಧಿಯ ಬಳಿ ವಿವಾಹಿತ ಮಹಿಳೆಯ ಸಮಾಧಿಯನ್ನು ನಿರ್ಮಿಸಿದರೆ, ಆ ಹುಡುಗ ಮುಂದಿನ ಜನ್ಮದಲ್ಲಿ ಬ್ರಹ್ಮಚಾರಿಯಾಗಿ ಉಳಿಯುವುದಿಲ್ಲ ಎಂದು ಸ್ಥಳೀಯ ಜನರು ನಂಬುವತ್ತಾರೆ.

ಅಲ್ಲದೆ, ಕೆಲ ವರದಿಗಳನ್ನು ನಂಬುವುದಾದರೆ, ಇಲ್ಲಿ ಹುಡುಗಿಯರ ಮೃತ ದೇಹಗಳಿಗೆ ಅಂತಹ ಮದುವೆಗಳಿಗೆ ಬೆಲೆ ಕಟ್ಟಲಾಗುತ್ತದೆ. ಇದಕ್ಕಾಗಿ ಜನರು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರಂತೆ ಎಂದು ಹೇಳಲಾಗುತ್ತದೆ. ಚೀನಾ ಸರ್ಕಾರ ಈ ಪದ್ಧತಿಯನ್ನು ಕಾನೂನುಬಾಹಿರವೆಂದು ಘೋಷಿಸಿದ್ದರೂ, ಕೆಲವು ಸ್ಥಳಗಳಲ್ಲಿ ಇದು ಇನ್ನೂ ನಡೆಯುತ್ತಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net