

iPhones : ವಿಶ್ವದ ಅತ್ಯುತ್ತಮ ಶಾಪಿಂಗ್ ತಾಣಗಳಲ್ಲಿ ದುಬೈ ಒಂದಾಗಿದೆ. ಹೀಗಾಗಿ, ಪ್ರಪಂಚದ್ಯಾಂತ ಶಾಪಿಂಗ್ಗಾಗಿ ಈ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಇಲ್ಲಿ ಐಷಾರಾಮಿ ಮತ್ತು ಬ್ರ್ಯಾಂಡೆಡ್ ವಸ್ತುಗಳು ಭಾರತಕ್ಕಿಂತಬ ಅಗ್ಗವಾಗಿವೆ. ಇದೇ ಕಾರಣಕ್ಕೆ ಇಲ್ಲಿ ಭಾರತ ಸೇರಿದಂತೆ ಇತರೆ ದೇಶಗಳಿಂದ ಹಲವು ಜನರಿಗೆ ಈ ಸ್ಥಳವು ಶಾಪಿಂಗ್ ಮಾಡಲು ತುಂಬಾ ಉತ್ಸುಕುರಾಗಿರುತ್ತಾರೆ. ಇಲ್ಲಿ ಯಾವ ವಸ್ತುಗಳು ಅಗ್ಗವಾಗಿವೆ ಮತ್ತು ಏಕೆ ಎಂಬುದು ತಿಳಿಯೋಣ.
ಸಾಮಾನ್ಯವಾಗಿ ದುಬೈ ಅನ್ನು ಚಿನ್ನದ ನಗರಿ ಎಂದು ಕರೆಯುತ್ತಾರೆ. ಇಲ್ಲಿ ದೊಡ್ಡ-ದೊಡ್ಡ ಚಿನ್ನದ ಅಂಗಡಿಗಳು 24*7 ತೆರೆದಿರುತ್ತವೆ. ಇಲ್ಲಿ ಚಿನ್ನ,ಬೆಳ್ಳಿ ಭಾರತಕ್ಕಿಂತ ಅಗ್ಗವಾಗಿವೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಶಾಪಿಂಗ್ ನೀತಿ ತೆರೆಗೆ ಮಕ್ತವಾಗಿದ್ದು,(Tax Free) ಅಮುದು ಸುಂಕ ಕೂಡ ಕಡಿಮೆಯಾಗಿದೆ. ಅಭರಣಗಳ ವಿನ್ಯಾಸ ಮತ್ತು ಗುಣಮಟ್ಟ ಕೂಡ ಉತ್ತಮವಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್‌ಗಳಿಗೂ ದುಬೈ ಅತ್ಯುತ್ತಮವಾಗಿದೆ. ಇಲ್ಲಿ ನೀವು ಐಫೋನ್‌ಗಳು, ಸ್ಮಾರ್ಟ್‌ಫೋನ್‌ಗಳು, ಕ್ಯಾಮೆರಾಗಳು, ಲ್ಯಾಪ್‌ಟಾಪ್‌ಗಳು ಬಹಳ ಕಡಿಮೆ ಬೆಲೆಗೆ ಸಿಗುತ್ತವೆ. ಇಲ್ಲಿ ಎಲೆಕ್ಟ್ರಾನಿಕ್ಸ್ ಮೇಲೆ ಕಡಿಮೆ ತೆರಿಗೆ ಇದೆ ಮತ್ತು ಆಮದು ಶುಲ್ಕಗಳು ಸಹ ಕಡಿಮೆ. ಹೀಗಾಗಿ, ಟ್ಯಾಕ್ಸಿ ಫ್ರೀ ಮತ್ತು ಕಡಿಮೆ ತೆರೆಗೆ ಕಾರಣವಾಗಿದೆ.
ರೋಲೆಕ್ಸ್ ಮತ್ತು ಒಮೆಗಾದಂತ ಪ್ರಸಿದ್ಧ ಕೈಗಡಿಯಾರ(ವಾಚ್)ಗಳು ಭಾರತಕ್ಕಿಂತ ತುಂಬಾ ಕಡಿಮೆ ಇದೆ.ನೀವು ಬ್ರಾಂಡೆಡ್ ಬಟ್ಟೆಗಳು ಮತ್ತು ಫ್ಯಾಷನ್ ಅನ್ನು ಇಷ್ಟಪಡುತ್ತಿದ್ದರೆ ದುಬೈ ನಿಮಗೆ ಉತ್ತಮ. ಇಲ್ಲಿ ಲೂಯಿಸ್, ಪರಾಡಾ, ಗುಸ್ಸಿ ಮುಂತಾದ ಬ್ರಾಂಡ್‌ಗಳ ಉತ್ಪನ್ನಗಳು ಭಾರತಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಅಲ್ಲದೆ, ಪ್ರಪಂಚದ ಪ್ರಸಿದ್ಧ ಕಾರುಗಳಾದ ಮರ್ಸಿಡಿನ್, ಲ್ಯಾಂಡ್ ಕ್ರೂಸರ್ ಮತ್ತು ಪಾರ್ಚೂನ್ ಕಾರುಗಳು ಭಾರತಕ್ಕಿಂತ ಕಡಿಮೆ ದರದಲ್ಲಿ ಲಭ್ಯವಿದೆ.
ದುಬೈನಲ್ಲಿ ಪೆಟ್ರೋಲ್ ಕೂಡ ಅಗ್ಗವಾಗಿದೆ. ಇಂದಿನಂತೆ, ಭಾರತದ ಕೆಲವು ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ದೆಹಲಿಯಲ್ಲಿ 94.77, ಕೋಲ್ಕತ್ತಾದಲ್ಲಿ 105.01, ಮುಂಬೈನಲ್ಲಿ 103.50 ಮತ್ತು ಚೆನ್ನೈನಲ್ಲಿ 101.23 ಲೀಟರ್‌ಗೆ ಇದೆ. ದುಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ಸುಮಾರು 2.85 AED (ಅರೇಬಿಯನ್ ಎಮಿರೇಟ್ಸ್ ದಿರ್ಹಮ್) ಇದೆ. ಅಲ್ಲದೆ, ದುಬೈನಲ್ಲಿ ವಿಶ್ವ ದರ್ಜೆಯ ಗುಣಮಟ್ಟದ ಪೀಠೋಪಕರಣಗಳು ಸಹ ಲಭ್ಯವಿದೆ. ಭಾರತದಲ್ಲಿ ಪೀಠೋಪಕರಣಗಳ ಗುಣಮಟ್ಟ ಅಷ್ಟೊಂದು ಉತ್ತಮವಾಗಿಲ್ಲ, ಆದರೆ ದುಬೈನಲ್ಲಿ ಕಡಿಮೆ ದರದಲ್ಲಿ ಲಭ್ಯವಿದೆ.(ಏಜೆನ್ಸೀಸ್)