ವೈಭವದ ಮಾರಿಕಾಂಬಾ ದೇವಿ ಉತ್ಸವ

TKE darmika
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ತರೀಕೆರೆ ತಾಲೂಕಿನ ಪಿರಮೇನಹಳ್ಳಿ ಗ್ರಾಮದ ಶ್ರೀ ಗುಡ್ಡದ ಮಾರಿಕಾಂಬಾ ಮೂಲ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ತರೀಕೆರೆ: ತಾಲೂಕಿನ ಪಿರಮೇನಹಳ್ಳಿ ಗ್ರಾಮದ ಶ್ರೀ ಗುಡ್ಡದ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಸೋಮವಾರ ವೈಭವದಿಂದ ಜರುಗಿತು. ಭಾನುವಾರ ರಾತ್ರಿ ಶ್ರೀಗುಡ್ಡದ ಮಾರಿಕಾಂಬಾ, ಶ್ರೀ ಕಾರಾಳಮ್ಮ, ಶ್ರೀ ಕೆಂಡದ ಮಾರಮ್ಮ ಹಾಗೂ ತುಳಜಾ ಭವಾನಿ ದೇವಿ ಮೂರ್ತಿಗಳ ಉತ್ಸವದೊಂದಿಗೆ ಜಾತ್ರಾ ಮಹೋತ್ಸವ ಆರಂಭವಾಯಿತು.
ಸೋಮವಾರ ಬೆಳಗ್ಗೆ ಶ್ರೀ ಗುಡ್ಡದ ಮಾರಿಕಾಂಬಾ ದೇವಿ ಮೂಲ ದೇವರಿಗೆ ಕಲ್ಲತ್ತಿಗಿರಿಯಿಂದ ತಂದಿದ್ದ ತೀರ್ಥದಿಂದ ಪುಣ್ಯಸ್ನಾನ ಮಾಡಿಸಿ ಹಾಲು, ತುಪ್ಪ, ಮೊಸರು, ಎಳೆನೀರು, ಜೇನುತುಪ್ಪ ಸೇರಿ ಸುಗಂಧ ದ್ರವ್ಯಾದಿಗಳಿಂದ ಅಭಿಷೇಕ ನೆರವೇರಿಸಲಾಯಿತು. ನಂತರ ವಿವಿಧ ಪುಷ್ಪಗಳಿಂದ ದೇವಿಯನ್ನು ಅಲಂಕಾರಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪಿರಮೇನಹಳ್ಳಿ, ಬೇಲೇನಹಳ್ಳಿ ತಾಂಡ, ಲಕ್ಕೇನಹಳ್ಳಿ, ಇಟ್ಟಿಗೆ ಮತ್ತಿತರ ಕಡೆಯಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net