

ಬಾಳೆಹೊನ್ನೂರು: ಆ.23ರಂದು ಪಟ್ಟಣದಿಂದ ನಾಪತ್ತೆಯಾಗಿದ್ದ ಮಾರ್ಸೆಲ್ ದುಸ್ತಿ ರೇಗೋ (89) ಅವರ ಶವ ಪಟ್ಟಣದ ಭದ್ರಾ ನದಿಯಲ್ಲಿ ಸೋಮವಾರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆ.23ರಂದು ಮಾರ್ಸೆಲ್ ದುಸ್ತಿ ರೇಗೋ ಮಠ ರಸ್ತೆಯ ಕೆರೆ ಚೌಡೇಶ್ವರಿ ದೇವಸ್ಥಾನದ ಸಮೀಪದ ಮನೆಯಿಂದ ವಾಕಿಂಗ್‌ಗೆ ತೆರಳಿದ್ದವರು ವಾಪಾಸ್ ಮನೆಗೆ ಬಂದಿರಲಿಲ್ಲ.
ಈ ಹಿನ್ನೆಲೆಯಲ್ಲಿ ಅವರ ಮಗ ವಾಲ್ಟರ್ ರೇಗೋ ಬಾಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದರು. ಭಾನುವಾರದಿಂದ ಪೊಲೀಸರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರು, ಅಗ್ನಿಶಾಮಕ ದಳದ ಸಿಬ್ಬಂದಿ ಭದ್ರಾನದಿಯಲ್ಲಿ ಶೋಧ ಕೈಗೊಂಡಿದ್ದರು. ಭಾನುವಾರ ಮಾರ್ಸೆಲ್ ದುಸ್ತಿ ರೇಗೋ ಬಳಸುತ್ತಿದ್ದ ಚಪ್ಪಲಿ, ವಾಕಿಂಗ್ ಸ್ಟಿಕ್, ಟೋಫಿ ಭದ್ರಾನದಿ ದಡದ ಸಮೀಪ ದೊರೆತಿತ್ತು. ಈ ಹಿನ್ನೆಲೆಯಲ್ಲಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕೆ ವ್ಯಕ್ತವಾಗಿತ್ತು. ಸೋಮವಾರ ಮತ್ತೆ ನದಿಯಲ್ಲಿ ಶೋಧ ಕಾರ್ಯ ಮುಂದುವರೆಸಿದಾಗ ಭದ್ರಾನದಿಯಲ್ಲಿ ಮಾರ್ಸೆಲ್ ದುಸ್ತಿ ರೇಗೋ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.