ಅಮೃತಬಿಂದು

Sudina-7-Amrutabindu
Published on

ಗುರೋಃ ಶಿವಸ್ಯ ಭಕ್ತಾನಾಂ ಸ್ತೋತ್ರಾಕರ್ಣನಮನ್ವಹಂ | ತತ್ ತ್ರಯೋವಿಂಶಕಂ ಪ್ರೋಕ್ತಂ ಮೋಕ್ಷಸಂಪ್ರಾಪ್ತಿಕಾರಣಂ ||

ಪ್ರತಿದಿನವೂ ತಪ್ಪದೆ ಗುರು, ಶಿವ ಮತ್ತು ಶಿವಭಕ್ತರ ಸ್ತೋತ್ರಗಳನ್ನು ಕೇಳುವುದು ಇಪ್ಪತ್ತಮೂರನೇ

ಶೀಲ. ಇದರ ಆಚರಣೆಯು ಮೋಕ್ಷಪ್ರಾಪ್ತಿಗೆ ಕಾರಣವಾಗಿದೆ. ಗುರು ಮುಂತಾದವರ ಸ್ತೋತ್ರಗಳನ್ನು

ಹೇಳುವುದರಿಂದ ನಾಲಗೆಯು ಪವಿತ್ರವಾದರೆ, ಕೇಳುವುದರಿಂದ ಕಿವಿಗಳು ಪವಿತ್ರಗೊಳ್ಳುತ್ತವೆ. ಕಿವಿಗೂ

ಮನಸ್ಸಿಗೂ ಹತ್ತಿರದ ಸಂಬಂಧ. ಆದ್ದರಿಂದ ನಾವು ಸದಾ ಯಾವುದರ ಗುಣಗಾನ ಕೇಳುವೆವೋ ಅದರ

ಪ್ರಭಾವಕ್ಕೆ ನಮ್ಮ ಮನಸ್ಸು ಒಳಗಾಗುತ್ತದೆ. ಯಾವುದರ ಪ್ರಭಾವಕ್ಕೆ ಮನಸ್ಸು ಒಳಗಾಗುತ್ತದೆಯೋ ಅದನ್ನೇ ನಾವು ಹಿಂಬಾಲಿಸುತ್ತೇವೆ.

| ಚಂದ್ರಜ್ಞಾನಾಗಮ (9.80 ) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net