ತೀವ್ರ ಆಕ್ರೋಶದ ನಡುವೆಯೂ ಮರಾಠರಿಗೆ ಮನ್ನಣೆ ನೀಡಿದ ರಾಜ್ಯ ಸರ್ಕಾರ

Vidhana Soudha vvani
Published on

ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆದರೂ ತನ್ನ ತೀರ್ಮಾನದಿಂದ ಹಿಂದೆ ಸರಿಯದ ಸರ್ಕಾರ, ಅಧಿಕೃತ ಆದೇಶವನ್ನೂ ಹೊರಡಿಸಿದೆ.

ಮರಾಠ ಸಮುದಾಯದ ಅಭಿವೃದ್ಧಿಗೆ ನಿಗಮ ರಚಿಸಲು ಹೊರಟಿದ್ದ ಸರ್ಕಾರ ಆರಂಭದಲ್ಲಿ ತೀವ್ರ ಆಕ್ರೋಶ ಎದುರಿಸಿತ್ತು. ಬಳಿಕ ಜನರ ಗೊಂದಲ ನಿವಾರಿಸಲು ಮರಾಠ ಸಮುದಾಯ ನಿಗಮದ ರಚಿಸುವುದಾಗಿ ಹೇಳಿತ್ತಲ್ಲದೇ ಸಂಪುಟದಲ್ಲೂ ನಿರ್ಧಾರ ಕೈಗೊಂಡಿತ್ತು. ಇದೀಗ ಮರಾಠ ಅಭಿವೃದ್ಧಿ ನಿಗಮ ಎಂದು ಹೆಸರನ್ನು ಪರಿಷ್ಕರಿಸಿದ್ದು, ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ರಾಜ್ಯದಲ್ಲಿ ಮರಾಠ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಅಭಿವೃದ್ಧಿ ಇತ್ಯಾದಿಗಾಗಿ ಈ ನಿಗಮ ಸ್ಥಾಪಿಸುತ್ತಿರುವುದಾಗಿ ಸರ್ಕಾರ ಹೇಳಿಕೊಂಡಿದೆ.

ಈ ಹಿಂದೆ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸುವುದಾಗಿ ಪ್ರಸ್ತಾವನೆ ಸಿದ್ಧ ಮಾಡಿಕೊಂಡಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ 50 ಕೋಟಿ ರೂ. ಮೀಸಲಿಡುವ ಪ್ರಸ್ತಾಪ ಮಾಡಿತ್ತು. ಇದೀಗ ನಿಗಮ ರಚನೆಗೆ ಅಧಿಕೃತ ಆದೇಶ ಹೊರಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net