ಕಪ್ಪಸೋಗೆಯಲ್ಲಿ ಮಾರಮ್ಮನ ಜಾತ್ರೆ

IMG-20250219-WA0006
ಕಪ್ಪಸೋಗೆಯಲ್ಲಿ ಮಾರಮ್ಮನ ಜಾತ್ರಾ ಮಹೋತ್ಸವ ಪ್ರಯುಕ್ತ ಭಕ್ತರು ದೇವವಸ್ಥಾನದ ಮುಂದೆ ಪೂಜೆ ಸಲ್ಲಿಸಿದರು.
Published on

ಕಪ್ಪಸೋಗೆ: ಪ್ರತಿವರ್ಷದಂತೆ ಈ ವರ್ಷವೂ ಕಪ್ಪಸೋಗೆ ಗ್ರಾಮ ದೇವತೆ ಕೆಂಡದ ಮಾರಮ್ಮನ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಹುಲ್ಲಹಳ್ಳಿಯ ಮಲ್ಲಿಕಾರ್ಜುನಾರಾಧ್ಯರ ನೇತೃತ್ವದಲ್ಲಿ ಬೆಳಗ್ಗೆ 5 ಗಂಟೆಗೆ ಗಣಪತಿ ಪೂಜೆ ಹೋಮ, ಹವನಗಳು ಜರುಗಿದವು. ಮಧ್ಯಾಹ್ನ 1 ಗಂಟೆ ನಂತರ ತಂಬಿಟ್ಟು ಹಾಗೂ ಮಂಡೆ ಪೂಜೆ ನೆರವೇರಿಸಲಾಯಿತು. 5 ಗಂಟೆಯ ನಂತರ ಮಾರಮ್ಮನ ಗುಡಿಯ ಮುಂದೆ ಕೊಂಡವನ್ನು ಹಾಕಿ ಎಲ್ಲರೂ ಭಕ್ತಿ ಭಾವದಿಂದ ಕೊಂಡವನ್ನು ಹಾಯ್ದರು ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಸತ್ತಿಗೆ, ಸೂರಿ ಪಾನಿ,ನಂದಿಧ್ವಜ, ವೀರಗಾಸೆ ಕುಣಿತ, ಕೊಂಬು, ತಮಟೆ ಮಂಗಳವಾದ್ಯಗಳೊಂದಿಗೆ ಕೆಂಡದ ಮಾರಮ್ಮನವರ ವಿಗ್ರಹ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಮಹಿಳೆಯರು ತಮ್ಮ ಮನೆಯಂಗಳಕ್ಕೆ ನೀರು ಹಾಕಿ ವಿವಿಧ ರೀತಿಯ ರಂಗೋಲಿ ಹಾಕಿ ಮೆರವಣಿಗೆಯನ್ನು ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net