

ಬೆಂಗಳೂರು: ರಾಜ್ಯದ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ತೋರುತ್ತ, ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ಮತ್ತಷ್ಟು ಜನಾನುರಾಗಿ ಆಗಿ ಗಮನ ಸೆಳೆದು, ನಾಡಿನ ಜನತೆಯಿಂದ ಇನ್ನಷ್ಟು ಮೆಚ್ಚುಗೆ ಪಡೆಯುತ್ತಿರುವ ಬಸವರಾಜ ಬೊಮ್ಮಾಯಿ ಅವರು ಇಂದು ದಿಗ್ವಿಜಯ ಸುದ್ದಿವಾಹಿನಿಯಲ್ಲಿ ಇದೀಗ ಮಾತನಾಡುತ್ತಿದ್ದಾರೆ.
ತಮ್ಮ ತಂದೆ, ಮುಖ್ಯಮಂತ್ರಿ ಆಗಿದ್ದ ಎಸ್.ಆರ್.ಬೊಮ್ಮಾಯಿ ಹಾಗೂ ತಾವು ಮುಖ್ಯಮಂತ್ರಿಯಾದ ಕುರಿತು ಮಾತ್ರವಲ್ಲದೆ, ರಾಜಕೀಯದ ವಿವಿಧ ಮಜಲು, ರಾಜ್ಯದ-ಜನತೆಯ ಹಲವಾರು ಸಮಸ್ಯೆ, ಮಾನವೀಯ ಮೌಲ್ಯ, ಅಂತಃಕರಣಗಳ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸಿಎಂ ಖುದ್ದು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ಸಿಎಂ ಕುರಿತು ಅವರ ಆಪ್ತರು, ಹಿರಿಯರು, ಸ್ನೇಹಿತರ ಅಭಿಪ್ರಾಯಗಳೂ ದಿಗ್ವಿಜಯದಲ್ಲಿ ಅನಾವರಣಗೊಳ್ಳುತ್ತಿದೆ.
ಶಾಸಕ, ಸಚಿವರಾಗಿ ಮತ್ತು ಇದೀಗ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ನೋಡಿದ ಜನತೆಗೆ ಅವರ ಕುರಿತ ಮತ್ತಷ್ಟು ಕುತೂಹಲಕರ ಸಂಗತಿಗಳು ದಿಗ್ವಿಜಯ್ ಸ್ಟುಡಿಯೋದಲ್ಲಿ ನೇರಪ್ರಸಾರವಾಗುತ್ತಿದೆ.