

ಬೆಂಗಳೂರು: ಕಳೆದ ವರ್ಷ 2023ರಲ್ಲಿ ತೆರೆಕಂಡ ಭಾರತೀಯ ಚಿತ್ರರಂಗದ ಅನೇಕ ಸಿನಿಮಾಗಳು ಸಿನಿಪ್ರೇಕ್ಷಕರನ್ನು ಮನರಂಜಿಸುವಲ್ಲಿ ಹಾಗೂ ಉತ್ತಮ ವಿಮರ್ಶೆಗಳನ್ನು ಪಡೆಯುವಲ್ಲಿ ಭರ್ಜರಿ ಯಶಸ್ಸನ್ನು ಕಂಡಿತು. ಬ್ಲಾಕ್ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದ ಸಿನಿಮಾಗಳ ಪೈಕಿ ಬಾಲಿವುಡ್, ಸ್ಯಾಂಡಲ್ವುಡ್, ಟಾಲಿವುಡ್ ಹಾಗೂ ಕಾಲಿವುಡ್ನ ಸ್ಟಾರ್ ನಟರ ಚಿತ್ರಗಳೇ ಅಧಿಕವಾಗಿದ್ದು, ಹಿಟ್ ಆಗದ ಫಿಲಂಗಳ ಹಾಡುಗಳು ಸೂಪರ್ ಡೂಪರ್ ಸಕ್ಸಸ್ ನೋಡಿದೆ. ಇದೀಗ ಇಡೀ ಜಗತ್ತೇ 2024ಕ್ಕೆ ಕಾಲಿಟ್ಟಿದ್ದು, ಹೊಸ ವರ್ಷದ ಹೊಸ್ತಿಲಲ್ಲಿ ಯಾವೆಲ್ಲಾ ಚಿತ್ರಗಳು ರಿಲೀಸ್ ಆಗಲಿದೆ? ಭರಪೂರ ಮನರಂಜನೆ ನೀಡಲಿದೆ ಎಂಬ ನಿರೀಕ್ಷೆ ಹೆಚ್ಚಿದೆ.
2024ರ ಸಂಕ್ರಾಂತಿ ಹಬ್ಬದ ವಾರದಲ್ಲಿ ಭಾರತೀಯ ಚಿತ್ರರಂಗದ ಹಲವಾರು ಸಿನಿಮಾಗಳು ಬಿಡುಗಡೆಗೆ ತಮ್ಮ ದಿನಾಂಕಗಳನ್ನು ಈಗಾಗಲೇ ನಿಗಡಿಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಒಂದರ ಹಿಂದೆ ಒಂದು ಎಂಬಂತೆ ರಿಲೀಸ್ಗೆ ತುದಿಗಾಲಿನಲ್ಲಿ ನಿಂತಿದೆ. ಆ ಪೈಕಿ ಟಾಲಿವುಡ್ ಹಾಗೂ ಕಾಲಿವುಡ್ ಸಿನಿಮಾಗಳೇ ಹೆಚ್ಚು ಎಂಬುದು ಸದ್ಯ ಅಚ್ಚರಿ ಸಂಗತಿ.
ಕಂಗುವ, ಪುಷ್ಪ 2, ಇಂಡಿಯನ್ 2, ದೇವರ, ಗುಂಟೂರು ಕಾರಂ, ಕ್ಯಾಪ್ಟನ್ ಮಿಲ್ಲರ್, ಕಲ್ಕಿ 2898 ಏಡಿ, ಮೇರಿ ಕ್ರಿಸ್ಮಸ್, ಮೈನ್ ಅಟಲ್ ಹೂನ್, ಹನುಮಾನ್, ಸೈಂಧವ್, ಈಗಲ್, ಉತ್ಸಾದ್ ಭಗತ್ ಸಿಂಗ್ ಸೇರಿದಂತೆ ಅನೇಕ ಚಿತ್ರಗಳು ರಿಲೀಸ್ ಆಗಲು ಸಾಲು ಸಾಲಾಗಿ ನಿಂತಿವೆ. ಈ ಪೈಕಿ ನಟ ಧನುಷ್ ಅಭಿನಯದ ಬಹುನಿರೀಕ್ಷಿತ 'ಕ್ಯಾಪ್ಟನ್ ಮಿಲ್ಲರ್' ಚಿತ್ರಕ್ಕೆ ಹೆಚ್ಚಿನ ನಿರೀಕ್ಷೆ ಇದೆ ಎಂಬುದು ಇತ್ತೀಚೆಗೆ ನಡೆಸಿದ ಪೋಲ್ನಲ್ಲಿ ತಿಳಿದುಬಂದಿದೆ,(ಏಜೆನ್ಸೀಸ್).