ಟಗರು ಪುಟ್ಟಿ ಮಾನ್ವಿತಾ ಕಾಮತ್ ಮದುವೆ; ಸಿನಿರಂಗದ ಖ್ಯಾತ ವ್ಯಕ್ತಿಯನ್ನೇ ಮದ್ವೆಯಾಗಲಿದ್ದಾರೆ ಈ ನಟಿ

manvita
Published on

ಬೆಂಗಳೂರು:  ಸ್ಯಾಂಡಲ್​​ವುಡ್​ ನಟಿ ಮಾನ್ವಿತಾ ಕಾಮತ್​ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಸುದ್ದಿ ವೈರಲ್​ ಆಗುತ್ತಿದ್ದಂತೆ ಹುಡುಗ ಯಾರು? ಮದುವೆ ಯಾವಾಗ? ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ನಾವು ನಿಮಗೆ ಸಂಪೂರ್ಣವಾದ ಮಾಹಿತಿ ನೀಡಲಿದ್ದೇವೆ.

ಮಾನ್ವಿತಾ ಕಾಮತ್  ಮೇ 1ರಂದು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಕುರಿತಾದ ಡಿಜಿಟೆಲ್ ಆಮಂತ್ರಣ ಪತ್ರಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಅಪ್ ಲೋಡ್ ಮಾಡಿದ್ದಾರೆ. ಮೈಸೂರು ಮೂಲದ ಅರುಣ್ ಎಂಬವರನ್ನು ನಟಿ ಮಾನ್ವಿತಾ ವಿವಾಹವಾಗಲಿದ್ದಾರೆ. ಅಂದಹಾಗೆ ಅರುಣ್ ಕೂಡ ಸಿನಿರಂಗಕ್ಕೆ ಚಿರಪರಿಚಿತರು ಎನ್ನಲಾಗಿದೆ. ಏಪ್ರಿಲ್ 30ರಂದು ಅರಶಿನ ಶಾಸ್ತ್ರ ಮತ್ತು ಮೇ 1ರಂದು ವಿವಾಹ ನಡೆಯಲಿದೆ.

ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಮ್ಯೂಸಿಕ್‌ ಪ್ರೊಡ್ಯೂಸರ್‌ ಆಗಿ ಗುರುತಿಸಿಕೊಂಡಿರುವ ಅರುಣ್‌ ಕುಮಾರ್‌ ಅವರ ಜತೆಗೆ ಮಾನ್ವಿತಾ ಮದುವೆ ನಿಶ್ಚಯವಾಗಿದೆ. ಹಾಗಾದರೆ ಮದುವೆ ಯಾವಾಗ? ಮೇ 1 ರಂದು ಗೌಡ ಸಾರಸ್ವತ ಬ್ರಾಹ್ಮಣ ಕೊಂಕಣಿ ಶೈಲಿಯಲ್ಲಿ ಈ ಜೋಡಿಯ ಕಲ್ಯಾಣ ಜರುಗಲಿದೆ. ಏ. 29ರಂದು ಅರಿಶಿಣ ಶಾಸ್ತ್ರ ನೆರವೇರಿದರೆ, ಏಪ್ರಿಲ್‌ 30ರಂದು ಸಂಗೀತ್‌ ಕಾರ್ಯಕ್ರಮ ಇರಲಿದೆ. ಇದಾದ ಬಳಿಕ ಮೇ 1ಕ್ಕೆ ಮಂಗಳೂರಿನಲ್ಲಿ ಮದುವೆ ನಡೆಯಲಿದೆ.

ಆರ್ ಜೆ ಆಗಿ ವೃತ್ತಿ ಆರಂಭಿಸಿದ ಮಾನ್ವಿತಾ ಕಾಮತ್ ನಂತರ ಸ್ಯಾಂಡಲ್ವುಡ್’ಗೆ ಎಂಟ್ರಿ ಕೊಟ್ಟರು. ಮೊದಲು ಸೂರಿ ನಿರ್ದೇಶನದ ಕೆಂಡ ಸಂಪಿಗೆ ಸಿನಿಮಾದಲ್ಲಿ ಅಭಿನಯಿಸಿದ ಮಾನ್ವಿತಾ ಜನಪ್ರಿಯತೆ ಪಡೆದುಕೊಂಡರು. ಅದಾದ ಬಳಿಕ ಟಗರು ಸಿನಿಮಾದ ಮೂಲಕ ಹೆಸರು ಗಳಿಸಿದ ಮಾನ್ವಿತಾ, ಟಗರು ಪುಟ್ಟಿ ಎಂದೇ ಖ್ಯಾತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net