

ರಾಯಚೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಮುಚ್ಚಿದ್ದ ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ಬಾಗಿಲನ್ನು ಜುಲೈ 2ರಿಂದ ಸಾರ್ವಜನಿಕರಿಗಾಗಿ ತೆರೆಯಲಾಗುತ್ತಿದೆ.
ರಾಘವೇಂದ್ರ ಸ್ವಾಮಿಯ ದರ್ಶನ ಭಾಗ್ಯ ಪಡೆಯಬೇಕೆಂದರೆ ಕೆಲವೊಂದು ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯ ಎಂದು ಆಡಳಿತ ಮಂಡಳಿ ಹೇಳಿದೆ.
ಕರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ತಗುಲದಂತೆ ಎಲ್ಲಾ ನಿಯಮಗಳನ್ನು ಪಾಲನೆ ಮಾಡಬೇಕಿದೆ. ಇವುಗಳ ಬಗ್ಗೆ ಮಠದ ಆಡಳಿತ ವ್ಯವಸ್ಥಾಪಕರು ನೀಡಿರುವ ಮಾಹಿತಿ ಇಲ್ಲಿದೆ:
* 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ
* ಗರ್ಭಿಣಿಯರಿಗೆ ಹಾಗೂ ವಯೋಸಹಸ ಸಂಬಂಧಿಸಿದಂತೆ ಕಾಯಿಲೆ ಇದ್ದವರಿಗೆ ಪ್ರವೇಶವಿಲ್ಲ.
* ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಆಧಾರ ಸಂಖ್ಯೆ ನೀಡಬೇಕು, ಮೊಬೈಲ್ ಸಂಖ್ಯೆ ನೀಡುವುದೂ ಕಡ್ಡಾಯ.
* ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 4 ರಿಂದ 6ರವರೆಗೂ ದರ್ಶನಕ್ಕೆ ಅವಕಾಶ
* ಬೇರೆಡೆಯಿಂದ ಬರುವ ಭಕ್ತರಿಗೆ ಮಠದ ವಸತಿ ನಿಲಯದಲ್ಲಿ ಒಂದು ಕೋಣೆಯಲ್ಲಿ ಇಬ್ಬರು ಒಂದು ದಿನ ಮಾತ್ರ ತಂಗಲು ಅವಕಾಶ ಕಲ್ಪಿಸಲಾಗುತ್ತದೆ.