ಕರ್ತಾಳು ಗ್ರಾಮದಲ್ಲಿ ರಾಮ ಮಂತ್ರಾಕ್ಷತೆ ವಿತರಣೆ

IMG-20240121-WA0191
Published on

ಸಾಲಿಗ್ರಾಮ: ಅಯೋಧ್ಯೆಯಲ್ಲಿ ಜ.22 ರಂದು ನಡೆಯುವ ರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ತಾಲೂಕಿನ ಕರ್ತಾಳು ಗ್ರಾಮದ ಮನೆ ಮನೆಗೆ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ರಾಮ ಮಂತ್ರಾಕ್ಷತೆ ಹಾಗೂ ಆಹ್ವಾನ ಪತ್ರಿಕೆ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಸ್ವಯಂ ಸೇವಕಿ ಪಾರ್ವತಿ ಕರತಾಳು, ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮೆ ಎಂದರು. ದೇಶದಾದ್ಯಂತ ಮನೆಮನೆಗೆ ಮಂತ್ರಾಕ್ಷತೆ ವಿತರಿಸುವ ಕಾರ್ಯ ಬಹುತೇಕ ಪೂರ್ಣವಾಗಿದೆ.
ಕುಗ್ರಾಮದ ಮನೆಗಳಿಗೂ ಮಂತ್ರಾಕ್ಷತೆ ತಲುಪಿಸುವುದು ಹೆಮ್ಮೆ ಎನಿಸುತ್ತದೆ ಎಂದರು. ಪ್ರತಿಯೊಬ್ಬರೂ ಧರ್ಮ ಮತ್ತು ರಾಷ್ಟ್ರದ ಗೌರವ ಪಾಲನೆಗೆ ಶ್ರದ್ಧೆಯಿಂದ ಶ್ರಮಿಸಬೇಕು. ಆಗ ಮಾತ್ರ ಸನಾತನ ಪರಂಪರೆ ಉಳಿಯುತ್ತದೆ ಎಂದರು. ಕರ್ತಾಳು ಗ್ರಾಮದ ಮುಖಂಡರಾದ ಪ್ರದೀಪ್ ಕೃಷ್ಣ, ಲಾವಣ್ಯಾ, ಬಸವಾರಾಧ್ಯ, ಮಮತಾ, ರಮ್ಯಾಸತೀಶ ್ ಆರಾಧ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net