ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಮಾನ್ಸಿ

record
ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ ಚಿಕ್ಕಮಗಳೂರಿನ ಮಾನ್ಸಿ ಎನ್.ವೈಷ್ಣವ್ ಅವರನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಭಿನಂದಿಸಿದರು.
Published on

ಚಿಕ್ಕಮಗಳೂರು: ಇಪ್ಪತ್ತೊಂದು ಅಡಿ ಉದ್ದದ ಬಟ್ಟೆ ಮೇಲೆ ಮೆಹಂದಿ ಬಿಡಿಸುವ ಮೂಲಕ ನಗರದ ಯುವತಿ ಮಾನ್ಸಿ ಎನ್.ವೈಷ್ಣವ್ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲು ಮಾಡಿದ್ದಾರೆ. ಕೇವಲ 8 ಗಂಟೆ ಅವಧಿಯಲ್ಲಿ 21 ಅಡಿ ಉದ್ದ ಹಾಗೂ 3 ಅಡಿ ಅಗಲದ ಬಟ್ಟೆ ಮೇಲೆ ಮೆಹಂದಿ ಬಿಡಿಸಿದ್ದಾರೆ. ಈ ಮೂಲಕ ಹಿಂದೆ 3 ದಿನದಲ್ಲಿ 19 ಅಡಿಯ ಬಟ್ಟೆಯ ಮೇಲೆ ಮೆಹಂದಿ ರಚಿಸಲಾಗಿದ್ದ ದಾಖಲೆ ಮುರಿದಿದ್ದಾರೆ.
ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಮಾನ್ಸಿ ಅವರು ಚಿಕ್ಕಮಗಳೂರಿನ ಗಾಂಧಿ ನಗರ ಬಡಾವಣೆಯ ನಿರ್ಮಲ್‌ಕುಮಾರ್ ವೈಷ್ಣವ್ ಹಾಗೂ ಪ್ರಮೀಳಾ ವೈಷ್ಣವ್ ಅವರ ಪುತ್ರಿ. ಮಾನ್ಸಿ ಅವರನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net