ಮನೋಲ್ಲಾಸ: ತ್ಯಾಗಕ್ಕೆ ಫಲ ನಿಶ್ಚಿತ

vesha
Published on
|ಸವಿತಾ ಹುನ್ನೂರ

ಒಂದು ಊರಿನ ರಾಜ ಒಮ್ಮೆ ತನ್ನ ರಾಜ್ಯದ ಅರ್ಹ ತ್ಯಾಗಿ ಮತ್ತು ಯೋಗಿಯನ್ನು ಕರೆಸಿ ಸನ್ಮಾನಿಸಲು ಇಚ್ಛಿಸಿದ. ಮಂತ್ರಿಗೆ ಇಂತಹ ವ್ಯಕ್ತಿಯನ್ನು ಗುರುತಿಸಿ ಕರೆತರುವಂತೆ ಆೆ ಮಾಡಿದನು. ಆ ಮಂತ್ರಿಗೆ ರಾಜ್ಯವನ್ನೆಲ್ಲ ಹುಡುಕಿದರೂ ಅಂಥ ಅರ್ಹ ವ್ಯಕ್ತಿ ದೊರೆಯಲಿಲ್ಲ. ಇದರಿಂದ ಆತ ಚಿಂತೆಗೊಳಗಾದ. ರಾಜಾೆ ನೆರವೇರಿಸದಿದ್ದರೆ ಶಿೆ ಖಂಡಿತವಾದ್ದರಿಂದ ಏನು ಮಾಡಲೂ ತೋಚದೇ ಕುಳಿತನು. ನಂತರ ಬಹುರೂಪಿ ಕಳ್ಳನೊಬ್ಬ ಭೇಟಿಯಾದನು. ಮಂತ್ರಿ ತನ್ನ ಸಮಸ್ಯೆಯನ್ನು ಅವನಿಗೆ ವಿವರಿಸಿದನು. ಆ ಬಹುರೂಪಿ ಕಳ್ಳನು ದೊಡ್ಡ ಯೋಗಿ ತ್ಯಾಗಿಯಂತೆ ರಾಜನ ಮುಂದೆ ನಟಿಸಿದರೆ ಒಂದು ತಟ್ಟೆಯ ತುಂಬಾ ಚಿನ್ನದ ನಾಣ್ಯಗಳನ್ನು ಕೊಡುವುದಾಗಿ ಮಂತ್ರಿ ಭಾಷೆ ಕೊಟ್ಟನು.

ಸ್ವಲ್ಪ ದಿನಗಳ ನಂತರ ಮಂತ್ರಿಯು ರಾಜನಿಗೆ "ತಮ್ಮ ಆೆಯಂತೆ ಒಬ್ಬ ಮಹಾ ಯೋಗಿ& ತ್ಯಾಗಿಯನ್ನು ಗುರುತಿಸಿದ್ದೇನೆ. ಅವರು ಊರ ಹೊರಗೆ ಒಂದು ಮಂದಿರದಲ್ಲಿ ಧ್ಯಾನದಲ್ಲಿ ಮಗ್ನರಾಗಿರುವರು' ಎಂದು ತಿಳಿಸಿದನು. ನಂತರ ಮಂತ್ರಿಯು ಆ ಕಳ್ಳನಿಗೆ ಯೋಗಿಯ ವೇಷ ಹಾಕಿಸಿ ರಾಜನ ಎದುರಿಗೆ ತಂದು ನಿಲ್ಲಿಸಿದನು. ರಾಜನು ಅತ್ಯಾದರದಿಂದ ಪರಿವಾರದೊಂದಿಗೆ ಮುತ್ತು, ರತ್ನ ವೈಢೂರ್ಯ ಹಣ್ಣು ಹಂಪಲಗಳನ್ನು ಅಣಿ ಮಾಡಿಕೊಂಡು ಯೋಗಿಯನ್ನು ಸತ್ಕರಿಸಲು ಮುಂದಾದನು. ಕಳ್ಳವೇಷದ ಯೋಗಿಯನ್ನು ಕಂಡು ಎಲ್ಲರೂ ಕಾಲಿಗೆ ಬಿದ್ದು ನಮಸ್ಕರಿಸಿದರು. "ತಮ್ಮಂತಹ ಯೋಗಿ, ತ್ಯಾಗಿಯನ್ನು ಪಡೆದ ನಮ್ಮ ರಾಜ್ಯ ಧನ್ಯವಾಗಿದೆ. ನಮ್ಮ ಕಾಣಿಕೆಯನ್ನು ಸ್ವೀಕರಿಸಬೇಕು' ಎಂದು ವಿನಂತಿಸಿದರು.

ಆದರೆ, ವೇಷಧಾರಿ ಯೋಗಿಯು ಎಲ್ಲವನ್ನೂ ತಿರಸ್ಕರಿಸಿದನು. ರಾಜನು ಇವನ ತ್ಯಾಗಭಾವ ನೋಡಿ ಸಂತೋಷಗೊಂಡು ಅರ್ಧ ರಾಜ್ಯವನ್ನೇ ನೀಡುವುದಾಗಿ ಹೇಳಿದನು. ವೇಷಧಾರಿ ಇದನ್ನೂ ತಿರಸ್ಕರಿಸಿದನು. ಯೋಗಿಯ ಬಗ್ಗೆ ಪೂರ್ಣ ಗೌರವವನ್ನು ತಾಳಿದ ರಾಜ ಹಾಗೂ ಎಲ್ಲ ಪ್ರಜೆಗಳು ಕೊಂಡಾಡಿದರು. ಕೊನೆಗೆ ರಾಜನು, "ಇಂದಿನಿಂದ ಇಡೀ ರಾಜ್ಯ ನಿಮ್ಮದೇ. ನಾವೆಲ್ಲ ತಮ್ಮ ಸೇವಕರು, ತಾವು ಹೇಳಿದಂತೆ ಕೇಳುವೆವು' ಎಂದು ಹೇಳಿದಾಗ ಕೂಡ ವೇಷಧಾರಿ ನಿಲಿರ್ಪ್ತ ಭಾವನೆಯಿಂದ ನಿಂತಿದ್ದ. ಎಲ್ಲರೂ ಹೋದ ನಂತರ, ಮಂತ್ರಿಯು ವೇಷಧಾರಿ ಯೋಗಿಗೆ ಧನ್ಯವಾದ ಅಪಿರ್ಸುತ್ತ ಒಪ್ಪಂದದಂತೆ ತಟ್ಟೆಯ ತುಂಬ ಚಿನ್ನದ ನಾಣ್ಯಗಳನ್ನು ಕೊಡಲು ಮುಂದಾದ. ಅದನ್ನೂ ಸ್ವೀಕರಿಸದ ವೇಷಧಾರಿಗೆ "ಅಯ್ಯಾ ನಿನ್ನ ನಟನೆ ಯಶಸ್ವಿಯಾಯಿತು. ಇನ್ನು ನಿನ್ನ ನಿಜರೂಪಿಗೆ ಬಾ' ಎಂದು ತಟ್ಟೆಯನ್ನು ಮುಂದಿಟ್ಟನು.

ವೇಷಧಾರಿ ಮತ್ತೆ ತಿರಸ್ಕರಿಸಿ "ನನಗೀಗ ತ್ಯಾಗದ ಬೆಲೆಯ ಅರಿವಾಗಿದೆ, ರಾಜ ಕೊಟ್ಟ ಕಾಣಿಕೆಗಳು, ರಾಜ್ಯವನ್ನೇ ತ್ಯಾಗ ಮಾಡಿದ ನನಗೆ ಇಡೀ ರಾಜ್ಯ ಮತ್ತು ಎಲ್ಲರೂ ಸೇವಕರಾಗಿ ದೊರೆತಿರುವಾಗ ನಿನ್ನ ಚಿನ್ನದ ನಾಣ್ಯಗಳು ಕ್ಷುಲ್ಲಕವೆನಿಸಿವೆ. ಇಂದಿನಿಂದ ನಿಜವಾಗಿ ತ್ಯಾಗಿಯಾಗಿಯೇ ಬದುಕುತ್ತೇನೆ' ಎಂದನು. ಇಲ್ಲಿ ವೇಷಧಾರಿ ಯೋಗಿಗೆ, ತ್ಯಾಗದಿಂದ ಉನ್ನತವಾದ ಸ್ಥಿತಿ ದೊರಕುತ್ತದೆ ಎಂಬುದು ಅರಿವಾಗುತ್ತದೆ. ತ್ಯಾಗಕ್ಕೆ ಫಲ ದೊರಕದೇ ಇರಲು ಸಾಧ್ಯವೇ ಇಲ್ಲ. ಮಹಾವೀರ, ಬುದ್ಧರ ಮಹಾ ತ್ಯಾಗದಿಂದಾಗಿಯೇ ಜನರೆಲ್ಲ ಅವರ ಅನುಯಾಯಿಗಳಾಗಿ ವಿಶ್ವದ ಮಹಾನ್​ ವ್ಯಕ್ತಿಗಳಾಗಿದ್ದಾರೆ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net