ಭೋವಿ ಸಮಾಜಕ್ಕೆ ಮಂಜರಿ ಹನುಮಂತಪ್ಪ ಕೊಡುಗೆ ಅಪಾರ

CTD 24 BOVI SRI-03
Published on

ಚಿತ್ರದುರ್ಗ: ಭೋವಿ ಸಮಾಜದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಯಲ್ಲಿ ಮಂಜರಿ ಹನುಮಂತಪ್ಪ ಅವರ ಕೊಡುಗೆ ಅಪಾರ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಭೋವಿ ವಿದ್ಯಾರ್ಥಿನಿಲಯದ ಶ್ರೀರಾಮ ಮಂದಿರದಲ್ಲಿ ಮಂಗಳವಾರ ಮಂಜರಿ ಹನುಮಂತಪ್ಪ ಅವರ 37ನೇ ವರ್ಷದ ಸ್ಮರಣಾರ್ಥ ಏರ್ಪಡಿಸಿದ್ದ ಕಾರ‌್ಯಕ್ರಮದಲ್ಲಿ ಮಾತನಾಡಿದರು.

ಹನುಮಂತಪ್ಪ ಅವರು ಶಾಲೆ, ಹಾಸ್ಟೆಲ್‌ಗಳನ್ನು ಆರಂಭಿಸಿ, ಭೋವಿ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು. ಅವರ ಸಾರ್ಥಕ ಬದುಕಿನಿಂದಾಗಿ ಏಳಿಗೆಯನ್ನು ಕಂಡಿರುವ ಜನರು ಪುನಃ ಸಮಾಜದ ಕಡೆಗೆ ಹಿಂತಿರುಗಿ ನೋಡುವ ಮೂಲಕ ಸ ಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕಿದ್ದು, ಹನುಮಂತಪ್ಪ ಅವರ ಬದುಕು ಆದರ್ಶವಾಗಬೇಕಿದೆ ಎಂದರು.

ಜಿಲ್ಲಾ ಭೋವಿ ಸಂಘದ ಪ್ರಧಾನ ಕಾರ‌್ಯದರ್ಶಿ ಎಚ್.ಲಕ್ಷ್ಮಣ್, ಎಸ್.ಜೆ.ಎಸ್.ಶಾಲೆಗಳ ಮುಖ್ಯಶಿಕ್ಷಕರಾದ ಎಂ.ಸಿ.ನಾಗರಾಜ, ಹನುಮಂತಪ್ಪ, ಶಿಕ್ಷಕರಾದ ಭಾಗ್ಯಮ್ಮ, ಶಾಂತಮ್ಮ, ಜಯಶ್ರೀ ಆನಂದ್, ಶಿವಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net