

ಶಿವಮೊಗ್ಗ: ಜಿಲ್ಲಾ ಮಹರ್ಷಿ ವಾಲ್ಮೀಕಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಜಂಬರಘಟ್ಟ ಟಿ.ಮಂಜಪ್ಪ ಹಾಗೂ ಉಪಾಧ್ಯಕ್ಷರಾಗಿ ಕೆ.ಎಸ್.ಹುಚ್ರಾಯಪ್ಪ ಶಿಕಾರಿಪುರ ಅವರು ಅವಿರೋಧವಾಗಿ ಆಯ್ಕೆಯಾದರು.
ಮಹರ್ಷಿ ವಾಲ್ಮೀಕಿ ಸಹಕಾರಿ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಪದಾಧಿಕಾರಿಗಳವನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬಳಿಕ ಮಾತನಾಡಿದ ಅಧ್ಯಕ್ಷ ಮಂಜಪ್ಪ ಅವರು, ಜಿಲ್ಲೆಯ ಎಲ್ಲ ಸಹಕಾರಿಗಳ ಸಂಪೂರ್ಣ ಸಹಕಾರದೊಂದಿಗೆ ಸಂಘ ಉತ್ತಮ ಸ್ಥಿತಿಗೆ ಬರಲು ನೆರವು ನೀಡಬೇಕು. ಜತೆಗೆ ಈಗಾಗಲೇ ಸಾಲ ಪಡೆದವರು ಮರುಪಾವತಿ ಮಾಡಬೇಕು. ಮತ್ತೆ ಸಾಲ ಪಡೆಯುವ ಅವಕಾಶವಿದ್ದು ಈ ನಿಟ್ಟಿನಲ್ಲಿ ಸಮಾಜದ ಎಲ್ಲ ಸದಸ್ಯರು ಸಂಪೂರ್ಣ ಸಹಕಾರ ನೀಡಬೇಕೆಂದು ವಿನಂತಿಸಿದರು.
ಸಂಘದ ನಿರ್ದೇಶಕರಾದ ಎಸ್.ಎಚ್.ಲಿಂಗಮೂರ್ತಿ, ವೈ.ಬಿ.ಚಂದ್ರಕಾಂತ್, ಎಸ್.ಪೂರ್ಣಿಮಾ, ಸಿ.ಬಿ.ಬಸವರಾಜ್, ಎನ್.ರಾಜಶೇಖರಪ್ಪ, ಬಿ.ರಾಮಪ್ಪ, ರೇವಣಪ್ಪ, ಆರ್.ಶಿವಕುಮಾರ್, ವಿ.ಸತೀಶ್, ಕೆ.ಬಿ.ಹಾಲಪ್ಪ, ಆರ್.ಮಂಜುಳಾ, ಶಕುಂತಲಾ ಎಡಚಿ, ಸಮಾಜದ ಮುಖಂಡರಾದ ಎಚ್.ಡಿ.ಮಾದೇವಪ್ಪ ಶಿಕಾರಿಪುರ, ತಾಲೂಕು ಅಧ್ಯಕ್ಷ ಹನುಮಂತಪ್ಪ, ರಂಗಪ್ಪ, ಪ್ರೊ.ಹನುಮಂತಪ್ಪ, ನಿಜಲಿಂಗಪ್ಪ, ಗಿರೀಶ್, ಮಹೇಶ್ ಎಲಿಗಾರ್, ಸತ್ಯನಾರಾಯಣ್ ಹಾಜರಿದ್ದರು. ಚುನಾವಣೆ ಅಧಿಕಾರಿಯಾಗಿ ವಿ. ಲಕ್ಷ್ಮೀ ಕಾರ್ಯನಿರ್ವಹಿಸಿದರು.