

ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ ಅವರು ಇನ್ನೇನು ಕೆಲ ಹೊತ್ತಲ್ಲೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಕಾರ್ಯಕ್ರಮ ಆರಂಭವಾಗಿದೆ.
ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮನೀಷ್ ಸಿಸೋಡಿಯ, ಈ ಹಿಂದಿನ ಸಚಿವ ಸಂಪುಟವನ್ನು ಮುಂದುವರಿಸುವ ಅರವಿಂದ ಕೇಜ್ರಿವಾಲ ಅವರ ತೀರ್ಮಾನದಲ್ಲಿ ತಪ್ಪೇನಿದೆ? ಹಿಂದಿನ ಸಂಪುಟದ ಕೆಲಸ ನೋಡಿಯೇ ಜನ ನಮ್ಮನ್ನು ಮತ್ತೆ ಆಯ್ಕೆ ಮಾಡಿದ್ದಾರೆ. ನಾವು ಜನರ ಭರವಸೆಯನ್ನು ಮತ್ತೊಮ್ಮೆ ಈಡೇರಿಸಲು ಬದ್ಧರಿದ್ದೇವೆ ಎಂದರು.
ರಾಮ್ ಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಅದರಲ್ಲೊಬ್ಬ ವಿಶೇಷ ಉಡುಪು ತೊಟ್ಟು ಗಮನ ಸೆಳೆದಿದ್ದಾನೆ. ನವಿಲು ಗರಿಗಳ ತರಹ ಪುಕ್ಕಗಳನ್ನು ಅಂಟಿಸಿಕೊಂಡಿರುವ ಆತ, ಪ್ರತಿ ಗರಿಯಲ್ಲೂ ಕೇಜ್ರಿವಾಲ್ ಅವರ ಫೋಟೋ ಹಾಕಿಕೊಂಡಿದ್ದಾನೆ. (ಏಜೆನ್ಸೀಸ್)