ಪಿಐಬಿ ಪ್ರಧಾನ ಡಿಜಿ ಆಗಿ ಮನೀಶ್ ದೇಸಾಯಿ ಅಧಿಕಾರ ಸ್ವೀಕಾರ

manish
Published on

ಬೆಂಗಳೂರು: ಪ್ರೆಸ್ ಇನ್‌ಾರ್ಮೆಷನ್ ಬ್ಯೂರೊ (ಪಿಐಬಿ) ಪ್ರಧಾನ ಡಿಜಿ ಆಗಿ 1989ನೇ ತಂಡದ ಐಎಸ್‌ಒ ಅಧಿಕಾರಿ ಮನೀಶ್ ದೇಸಾಯಿ ಅಧಿಕಾರ ಸ್ವೀಕರಿಸಿದ್ದಾರೆ.

ಈವರೆಗೆ ಈ ಹುದ್ದೆಯಲ್ಲಿದ್ದ ರಾಜೇಶ್ ಮಲ್ಹೋತ್ರ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಮನೀಶ್ ದೇಸಾಯಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿತ್ತು.

ತಮ್ಮ ಸೇವಾವಧಿಯ ಮೂರು ದಶಕದಲ್ಲಿ ಸೆಂಟ್ರಲ್ ಬ್ಯೂರೋ ಆಫ್​ ಕಮ್ಯೂನಿಕೇಷನ್ ವಿಭಾಗದ ಪ್ರಧಾನ ಡಿಜಿ ಹುದ್ದೆಗೂ ಮುನ್ನ ಸಿನಿಮಾ ವಿಭಾಗದ ಡಿಜಿಯಾಗಿ, ಆಡಳಿತ ಹಾಗೂ ತರಬೇಟಿ ವಿಭಾಗದ ಹೆಚ್ಚುವರಿ ಡಿಜಿಯಾಗಿ, ಸಿಬಿಎಫ್​ಸಿ ಸಿಇಒ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. ಮುಂಬೈನಲ್ಲಿ ಭಾರತೀಯ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮ್ಯೂಸಿಯಂ ಸ್ಥಾಪಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net