

ಇಂಫಾಲ್: ಹಿಂಸಾಚಾರ ಹೆಚ್ಚಿಸಲು ಮ್ಯಾನ್ಮಾರ್‌ನಿಂದ 900 ಭಯೋತ್ಪಾದಕರು ಮಣಿಪುರವನ್ನು ಪ್ರವೇಶಿಸಿದ್ದಾರೆ. ಇದನ್ನು ಗುಪ್ತಚರ ಸಂಸ್ಥೆಗಳ ವರದಿಗಳಲ್ಲಿ ಪ್ರಸ್ತಾಪಿಸಿದ್ದು, ಈಶಾನ್ಯ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಮ್ಯಾನ್ಮಾರ್‌ಗೆ ಹೊಂದಿಕೊಂಡಿರುವ ಗುಡ್ಡಗಾಡು ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕುಕಿ ಸಮುದಾಯ ಪ್ರಾಬಲ್ಯದ ಪ್ರದೇಶಗಳಲ್ಲಿ ಭಯೋತ್ಪಾದಕರು ಚದುರಿಹೋಗಿದ್ದು, 30-30 ಗುಂಪುಗಳಲ್ಲಿ ರಾಜ್ಯಾದ್ಯಂತ ಭಯೋತ್ಪಾದನೆ ಹರಡಲು ಯೋಚಿಸಿದ್ದಾರೆ ಎಂದು ವರದಿ ಹೇಳಿದೆ.
ಗುಪ್ತಚರ ವರದಿಗಳ ಎಚ್ಚರಿಕೆ ಬೆನ್ನಲ್ಲೇ ಮಣಿಪುರದಲ್ಲಿ ಪೊಲೀಸ್ ಅಲರ್ಟ್ ಕೂಡ ಹಾಕಲಾಗಿದೆ.
ಭಯೋತ್ಪಾದಕರ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಏಜೆನ್ಸಿಗಳನ್ನು ಕಟ್ಟೆಚ್ಚರ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಕೂಡ ಗುಪ್ತಚರ ಇಲಾಖೆಯ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ.
ಮಾಹಿತಿ ಪ್ರಕಾರ ಮ್ಯಾನ್ಮಾರ್ ಪ್ರವೇಶಿಸಿರುವ ಭಯೋತ್ಪಾದಕರು ಡ್ರೋನ್ ಕಾರ್ಯಾಚರಣೆಯಲ್ಲಿ ನಿಪುಣರಾಗಿದ್ದಾರೆ. ಗುಪ್ತಚರ ಇಲಾಖೆಯ ವರದಿಯನ್ನು ರಾಜ್ಯದ ಎಲ್ಲಾ ಎಸ್ಪಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಕಳುಹಿಸಲಾಗಿದೆ.