

ಚೆನ್ನೈ: ಭಾರತ ಮತ್ತು ಬಾಂಗ್ಲಾ ನಡುವೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶುಕ್ರವಾರ ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 376 ರನ್‌ಗಳ ಪ್ರಬಲ ಸ್ಕೋರ್ ಮಾಡುವಲ್ಲಿ ಯಶಸ್ವಿಯಾಗಿದೆ.
ಭಾರತದ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ ಬಾಂಗ್ಲಾ ತಂಡ 149 ರನ್‌ಗೆ ಸೀಮಿತವಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬೂಮ್ರಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದು, ನಾಲ್ಕು ವಿಕೆಟ್ ಪಡೆದು ಗಮನ ಸೆಳೆದರು.
ಮೊದಲ ಟೆಸ್ಟ್‌ನ ಎರಡನೇ ದಿನದಂದು ಭಾರತವು ಬಾಂಗ್ಲಾದೇಶವನ್ನು 149 ರನ್‌ಗಳಿಗೆ ಆಲೌಟ್ ಮಾಡಿದೆ. ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ಮತ್ತು ಆಕಾಶ್ ದೀಪ್ ತಲಾ ಎರಡು ವಿಕೆಟ್ ಪಡೆದರು. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ವಿರುದ್ಧ ಭಾರತ 227 ರನ್‌ಗಳ ಮುನ್ನಡೆ ಸಾಧಿಸಿದೆ.
ಮೊದಲ ದಿನ ರವಿಚಂದ್ರನ್ ಅಶ್ವಿನ್ (113), ರವೀಂದ್ರ ಜಡೇಜಾ (86) ಸ್ಮರಣೀಯ ಜೊತೆಯಾಟವಾಡಿ ಮುನ್ನಡೆಗೆ ಕಾರಣರಾದರು. ಭಾರತ ಒಟ್ಟು 376 ರನ್ ಗಳಿಸಿ ಆಲೌಟ್ ಆಗಿತ್ತು. ತಂಡವು ಆರಂಭದಲ್ಲಿ 6 ವಿಕೆಟ್‌ಗೆ 144 ರನ್ ಗಳಿಸುವ ಮೂಲಕ ತತ್ತರಿಸಿತ್ತಾದರೂ ಆಗ ಅಶ್ವಿನ್ ಮತ್ತು ಜಡೇಜಾ ಜೋಡಿ ಏಳನೇ ವಿಕೆಟ್‌ಗೆ 199 ರನ್ ಕಲೆಹಾಕುವ ಮೂಲಕ ಮುನ್ನಡೆಗೆ ಕಾರಣರಾಗಿದ್ದರು.
ತಂಡಗಳು ಹೀಗಿವೆ: ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಸರ್ಫರಾಜ್ ಖಾನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಧ್ರುವ ಜುರೆಲ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಬುಮ್ರಾ ಸಿರಾಜ್, ಯಶ್ ದಯಾಳ್, ಆಕಾಶ್ ದೀಪ್.
ಬಾಂಗ್ಲಾದೇಶ ಟೆಸ್ಟ್ ತಂಡ: ಮಹಮ್ಮದುಲ್ ಹಸನ್ ಜಾಯ್, ಶದ್ಮನ್ ಇಸ್ಲಾಂ, ಜಾಕಿರ್ ಹಸನ್, ಮೊಮಿನುಲ್ ಹಕ್, ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಲಿಟನ್ ದಾಸ್ (ವಿಕೆಟ್ ಕೀಪರ್), ಜೇಕ್ ಅಲಿ, ಮೆಹದಿ ಹಸನ್ ಮಿರಾಜ್, ಖಾಲಿದ್ ಅಹ್ಮದ್, ಹಸನ್ ಮಹಮ್ಮದ್, ತಸ್ಕಿನ್ ಅಹ್ಮದ್, ತೈಜುಲ್ ಇಸ್ಲಾಂ, ನಯೀಮ್ ಹಸನ್, ನಹಿದ್ ರಾಣಾ