ಬೆಂಗಳೂರು:
ಬೆಂಗಳೂರಿನ ಮಣಿಪಾಲ್ ಶಿಕ್ಷಣ ಸಂಸ್ಥೆಯಲ್ಲಿ ಓಪನ್ ಹೌಸ್ ಕಾರ್ಯಕ್ರಮ ಏ 6ಕ್ಕೆ ನಡೆಯಲಿದ್ದು, ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಸಂಸ್ಥೆಯಲ್ಲಿ ಇರುವಂಥ ವ್ಯಾಪಕವಾದ ಶೈಕ್ಷಣಿಕ ಕೋರ್ಸಗಳ ವಿವರಗಳು, ಇಲ್ಲಿನ ಅತ್ಯಾಧುನಿಕವಾದ ಮೂಲಸೌಕರ್ಯ ಹಾಗೂ ಕ್ಯಾಂಪಸ್ ಒಳಗೆ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯ, ಸವಲತ್ತು ಹಾಗೂ ಸಂಸ್ಥೆಯಲ್ಲಿ ವಿದ್ಯಾರ್ಥಿ ಜೀವನ ಹೇಗಿರುತ್ತದೆ ಎಂಬುದನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುತ್ತದೆ.
ಬೌದ್ಧಿಕ ಸ್ಪರ್ಧೆಯ ಮೂಲಕ ಶೈಕ್ಷಣಿಕ ಉತ್ಕೃಷ್ಟತೆಯನ್ನು ಉತ್ತೇಜಿಸುವ ಉದ್ದೇಶ ಸಹ ಇದೆ. ಪೋಷಕರಿಗೆ ತಮ್ಮ ಮಕ್ಕಳನ್ನು ಈ ಸಂಸ್ಥೆಗೆ ಸೇರಿಸಬೇಕು ಎಂಬ ಉದ್ದೇಶ ಇದ್ದಲ್ಲಿ ತಾವೇ ಖುದ್ದಾಗಿ ಇಲ್ಲಿನ ಸಮಗ್ರ ಕಲಿಕಾ ವಾತಾವರಣದ ಬಗ್ಗೆ ತಿಳಿಯುವುದಕ್ಕೆ ಈ ಕಾರ್ಯಕ್ರಮದ ಅತ್ಯುತ್ತಮ ಅವಕಾಶ ಒದಗಿಸುತ್ತದೆ.
ಬೆಂಗಳೂರಿನ ಕ್ಯಾಂಪಸ್‌ನಲ್ಲಿ ಬೆಳಗ್ಗೆ 9.30ಕ್ಕೆ ಚಾಲನೆ ನೀಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಸಂವಾದ ಕಾರ್ಯಾಗಾರಗಳು ನಡೆಯಲಿವೆ.
ಬೆಂಗಳೂರಿನ ಮಣಿಪಾಲ್ ಅಕಾಡೆಮಿಯಲ್ಲಿ ಪ್ರವೇಶಾತಿ ವಿಭಾಗದ ಉಪನಿರ್ದೇಶಕರಾದ ಗೌರವ ಯಾದವ್ ಅವರಿಂದ ಮಧ್ಯಾಹ್ನ 1.30ಕ್ಕೆ ಸ್ವಾಗತ ಪ್ರಸ್ತುತಿ ಮತ್ತು ಪ್ರಶ್ನೋತ್ತರ ನಡೆಯಲಿದೆ.
ಸಂಸ್ಥೆಯ ಪ್ರೊ ಚಾನ್ಸಲರ್ ಪ್ರೊ.ಮಧು ವೀರರಾಘವನ್ ಅವರಿಂದ ಮಾತುಕತೆ ನಡೆಯಲಿದೆ. ದಿನದ ಕೊನೆಗೆ ಸ್ಟ್ಯಾಂಡ್ ಅಪ್ ಕಮೆಡಿಯನ್ ಕೆನ್ನಿ ಸೆಬಾಸ್ಟಿಯನ್ ಕಾರ್ಯಕ್ರಮ ಇರಲಿದೆ.
ನಿಮ್ಮ ಹೆಸರನ್ನು ನೋಂದಾಯಿಸಿ. ನೋಂದಣಿಯ ಲಿಂಕ್ ಇಲ್ಲಿದೆ: ಠಿಠಿ://ಟ್ಝ.ಞಚ್ಞಜಿಚ್ಝ.ಛಿಛ್ಠ/್ಝ/ಞಛಿಚ್ಝ್ಟಿ/ಟಛ್ಞಿ-ಟ್ಠಛಿ.ಠಿಞ್ಝ