ಮನಿಮಾತು| ಲಾಭ ತರುವ ಟರ್ಕಿ ಕೋಳಿ ಸಾಕಣೆ

Turkey Poultry Farming
Published on
1000 ಕೋಳಿ ಸಾಕಿದರೆ ಕೇವಲ 7ರಿಂದ 8 ತಿಂಗಳಿನಲ್ಲಿ 10 ಲಕ್ಷ ರೂ. ಲಾಭ ಪಡೆಯಬಹುದು. ಇದು ಮಾಂಸ ಮತ್ತು ಮೊಟ್ಟೆ ಎರಡರಲ್ಲಿಯೂ ಆದಾಯ ನೀಡುವ ಟರ್ಕಿ ಕೋಳಿಯಿಂದ ಮಾತ್ರ ಸಾಧ್ಯ. ರೈತರಿಗಾಗಲಿ ಅಥವಾ ಉದ್ಯಮಿಗಳಿಗಾಗಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯುವುದಕ್ಕೆ ಇರುವ ಅವಕಾಶಗಳಲ್ಲಿ ಟರ್ಕಿ ಕೋಳಿ ಸಾಕಾಣಿಕೆ ಒಂದು. ನೀವು ಏನಾದರೂ ಬಿಸಿನೆಸ್ ಅಥವಾ ಕೃಷಿ ಮಾಡಿ ಹಣ ಮಾಡಬೇಕು ಎಂದು ನಿರ್ಧರಿಸಿದ್ದರೆ, ಟರ್ಕಿ ಕೋಳಿ ಸಾಕಾಣಿಕೆ ಮಾಡಿದರೆ ಡಬಲ್ ಆದಾಯ ಗಳಿಸುವುದಕ್ಕೆ ಖಂಡಿತಾ ಸಾಧ್ಯ. ಮೂಲತಃ ಉತ್ತರ ಅಮೆರಿಕದ ತಳಿಯಾದ ಈ ಕೋಳಿ ಉದ್ಯಮ ಭಾರತದಲ್ಲಿಯೂ ದಿನೇದಿನೆ ಹೆಚ್ಚುತ್ತಿದೆ. ಇದರಿಂದ ಹಳ್ಳಿಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಇದನ್ನೇ ಒಂದು ಉದ್ಯಮವನ್ನಾಗಿ ಮಾಡಿ ಉದ್ಯೋಗಾವಕಾಶ ಒದಗಿಸುವುದಕ್ಕೆ ಹೆಚ್ಚು ಅವಕಾಶಗಳಿವೆ.

ಮಾರುಕಟ್ಟೆ ಮೌಲ್ಯ: ಸಾಮಾನ್ಯ ನಾಟಿ ಕೋಳಿಯಂತೆ ಸಾಕಾಣಿಕೆ ಮಾಡಬಹುದಾದ ಈ ಕೋಳಿಗಳ ಮಾಂಸ ಮತ್ತು ಮೊಟ್ಟೆಗಳಿಗೆ ಹೆಚ್ಚು ಬೇಡಿಕೆ ಇದೆ. ಕ್ರಿಸ್​ವುಸ್ ಸಮಯದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟರ್ಕಿ ಕೋಳಿಯ ಜಾಗತಿಕ ಮಾರುಕಟ್ಟೆ ಮೌಲ್ಯ 2019ರಲ್ಲಿ 12.8 ಬಿಲಿಯನ್ ಯುಎಸ್ ಡಾಲರ್. ಅಂದರೆ ಭಾರತಿಯ ರೂಪಾಯಿ ಮೌಲ್ಯ 96 ಸಾವಿರ ಕೋಟಿ ರೂ. ಇಂದು ಲಕ್ಷ ಕೋಟಿಗೂ ಹೆಚ್ಚು ದೊಡ್ಡದಾದ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಇದರಲ್ಲಿ ಅಮೆರಿಕ ಒಂದರಲ್ಲಿಯೇ ಪ್ರತಿ ವರ್ಷ 2.4 ಮಿಲಿಯನ್ ಟನ್ ಅಂದ್ರೆ 24 ಲಕ್ಷ ಟನ್ ಟರ್ಕಿ ಕೋಳಿ ಮಾಂಸ ಬಳಕೆಯಾಗುತ್ತಿದೆ. ಇನ್ನು ಎರಡು ಮತ್ತು ಮೂರನೇ ಸ್ಥಾನದಲ್ಲಿ ಕ್ರಮವಾಗಿ ಬ್ರೆಜಿಲ್ ಹಾಗೂ ಜರ್ಮನಿ ಇದೆ. ಭಾರತದಲ್ಲಿ ದಿನೇದಿನೆ ಈ ಕೋಳಿಯ ಮಾರುಕಟ್ಟೆ ಹೆಚ್ಚುತ್ತಿದ್ದು ಕೇರಳ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಟರ್ಕಿ ಕೋಳಿಯನ್ನು ಹೆಚ್ಚಾಗಿ ಸಾಕಲಾಗುತ್ತಿದೆ. ಒಟ್ಟಿನಲ್ಲಿ ಹೇಳುವುದಾದರೆ ಟರ್ಕಿ ಕೋಳಿ ಸಾಕಾಣಿಕೆಯತ್ತ ಒಲವು ತೋರಿಸಿ ಸತತ ಪರಿಶ್ರಮ ವಹಿಸಿದರೆ ಇದರಿಂದ ಲಾಭ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಆಹಾರ ಮತ್ತು ಆರೈಕೆ: ಟರ್ಕಿ ಕೋಳಿ ಸಾಕಾಣಿಕೆಗೆ ಇತರೆ ಕೋಳಿಗಳಂತೆಯೇ, ಸ್ವಚ್ಚವಾದ ಗಾಳಿ, ಉತ್ತಮ ವಾತಾವರಣ ಮತ್ತು ನೀರು ಅಗತ್ಯ. ಶೆಡ್ ಮಾಡಿ ಕೋಳಿ ಸಾಕಾಣಿಕೆ ಮಾಡಿದರೆ ಉತ್ತಮ. ಸಾಮಾನ್ಯವಾಗಿ ನಾಟಿ ಕೋಳಿಯಂತೆ ಬದುಕು ಸಾಗಿಸಬಲ್ಲ ಈ ಕೋಳಿಗಳಿಗೆ ಯಾವುದೇ ವಿಶೇಷವಾದ ಆಹಾರದ ಪೂರೈಕೆ ಅಗತ್ಯವಿಲ್ಲ. ಈ ಕೋಳಿ ಕೂಡ ಎರೆಹುಳು, ಸಣ್ಣ ಹುಳು, ಗೆದ್ದಲು ಹುಳು ಹಾಗೂ ಅಡುಗೆ ವೇಸ್ಟ್ ತಿನ್ನುತ್ತದೆ. ಜತೆಗೆ ಆರೈಕೆ ಅತ್ಯಗತ್ಯ. ಕಾಲಕ್ಕೆ ತಕ್ಕಂತೆ ಜಂತುನಾಶಕ ಔಷಧಗಳನ್ನು ಪಶುವೈದ್ಯರ ಸಲಹೆ ಮೇರೆಗೆ ಬಳಸಬೇಕಾಗುತ್ತದೆ. ಅಲ್ಲದೆ ಪಾಕ್ಸ್, ಆರ್.ಡಿ, ರೈನೋಟ್ರೇಕೈಟಿಸ್ ಮುಂತಾದ ರೋಗಗಳು ಬರದಂತೆ ರೋಗನಿರೋಧಕ ಲಸಿಕೆಗಳನ್ನು ಹಾಕಿಸಬೇಕು. ಕೋಳಿ ಶೆಡ್​ಗೆ ಕ್ರಿಮಿನಾಶಕ ಔಷಧಗಳನ್ನು ಸಿಂಪಡಿಸಿ ಸ್ವಚ್ಛಗೊಳಿಸುವುದರಿಂದ ರೋಗಗಳಿಂದ ಕಾಪಾಡಿಕೊಳ್ಳಬಹುದು.

ಟರ್ಕಿ ಕೋಳಿಗೆ ಯಾಕೆ ಬೇಡಿಕೆ?: ಹೆಚ್ಚು ತೂಕ, ಹೆಚ್ಚು ಬೆಲೆ ಹೊಂದಿರುವ ಟರ್ಕಿ ಕೋಳಿಯ ಮಾಂಸ ಕೊಬ್ಬು ರಹಿತವಾಗಿರುತ್ತೆ. ಅಲ್ಲದೆ, ಇದರ ಮಾಂಸದಲ್ಲಿ ಅಮೈನೋ ಆಮ್ಲ, ನಿಯಾಸಿಸ್, ವಿಟಮಿನ್ ಬಿ ಸೇರಿ ಸಾಕಷ್ಟು ಆರೋಗ್ಯಕರ ಪ್ರೋಟಿನ್ ಒಳಗೊಂಡಿರುತ್ತದೆ. ಈ ಕೋಳಿಯ ಮಾಂಸ ಮಧುಮೇಹಿಗಳಿಗೆ ಬಹಳ ಉಪಯುಕ್ತ ವಾಗಿರುವುದರಿಂದ ಇದರ ಬೇಡಿಕೆ ಹೆಚ್ಚುತ್ತಿದೆ.

ಲಾಭದಾಯಕವೇ ಟರ್ಕಿ ಕೋಳಿ?: ಸಾಮಾನ್ಯ ಕೋಳಿಗಳಿಗಿಂತ 3ರಿಂದ 4 ಪಟ್ಟು ಗಾತ್ರದಲ್ಲಿ ದೊಡ್ಡದಾಗಿರುವ ಟರ್ಕಿ ಕೋಳಿ ಮಾಂಸ ಕೆ.ಜಿ.ಗೆ 300-350 ರೂ. ಇದೆ. ಈ ಕೋಳಿಗಳ ಮೊಟ್ಟೆಯೂ ಇತರ ಕೋಳಿ ಮೊಟ್ಟೆಗಿಂತ ದೊಡ್ಡದಾಗಿರುತ್ತದೆ. ಮೊಟ್ಟೆಯ ಮಾರುಕಟ್ಟೆ ಬೆಲೆ 30 ರೂ. ಅಲ್ಲದೆ, ಒಂದು ಕೋಳಿ ಮಾರುಕಟ್ಟೆ ಬೆಲೆ 1200ರಿಂದ 2500 ರೂ. ಇರುತ್ತದೆ. ಒಂದು ಕೋಳಿ ಕನಿಷ್ಠ 10 ಕೆ.ಜಿ ತೂಗುತ್ತದೆ. 30ನೇ ವಾರಕ್ಕೆ ಮೊಟ್ಟೆ ಇಡುವುದಕ್ಕೆ ಹೆಣ್ಣು ಕೋಳಿ ಆರಂಭಿಸಿದರೆ, ಮುಂದಿನ 24 ವಾರಗಳಲ್ಲಿ 60ರಿಂದ 100 ಮೊಟ್ಟೆ ಇಡುತ್ತದೆ. ಹೀಗೆ ಮೊಟ್ಟೆ ಮತ್ತು ಮಾಂಸದಿಂದ ಆದಾಯ ನೀಡುವಂತಹ 1000 ಟರ್ಕಿ ಕೋಳಿಗಳನ್ನು ಸಾಕಿದರೆ ಕೇವಲ 7ರಿಂದ 8 ತಿಂಗಳಿನಲ್ಲಿ ಕನಿಷ್ಠ 1500 ರೂ.ನಂತೆ ಮಾರಾಟ ಮಾಡಿದರೂ 15 ಲಕ್ಷ ರೂ. ಗಳಿಸಬಹುದು. ಮರಿಗಳ ಬೆಲೆ 140 ರೂ.ನಂತೆ 1,40,000 ಸೇರಿ ಆಹಾರ, ವ್ಯಾಕ್ಸಿನ್ ಮತ್ತು ಔಷಧ, ನಿರ್ವಹಣೆ, ಕಾರ್ವಿುಕರು, ಶೆಡ್ ನಿರ್ವಣದ ಖರ್ಚು ಸೇರಿ 8 ಲಕ್ಷ ರೂ. ತೆಗೆದರೂ 7 ಲಕ್ಷ ರೂ. ಲಾಭ ಪಡೆಯಬಹುದು. ಇಷ್ಟೇ ಅಲ್ಲದೆ, 1000 ಕೋಳಿಯಲ್ಲಿ ಕೇವಲ 250 ಹೆಣ್ಣು ಕೋಳಿಗಳಿದ್ದರೂ ಒಂದು ಕೋಳಿಯಿಂದ ಕನಿಷ್ಠ 60 ಮೊಟ್ಟೆ ಅಂದರೂ ಒಟ್ಟು 15,000 ಮೊಟ್ಟೆ ಸಿಗಲಿದೆ. ಒಂದು ಮೊಟ್ಟೆಗೆ 30 ರೂ. ಅಂದರೂ 15000 ಮೊಟ್ಟೆಗೆ ಕನಿಷ್ಠ 3ರಿಂದ 4 ಲಕ್ಷ ರೂ. ಪಡೆಯಬಹುದು. ಒಟ್ಟಾರೆಯಾಗಿ ಕೇವಲ 1000 ಕೋಳಿಯಿಂದ 10 ಲಕ್ಷ ರೂ. ಲಾಭ ಪಡೆಯಬಹುದು. ಅದು ಕೂಡ ಕೇವಲ 7ರಿಂದ 8 ತಿಂಗಳಿನಲ್ಲಿ.

ಕೋರ್ಸ್​ನಲ್ಲಿ ಏನೇನಿದೆ?

  • ಕೋರ್ಸ್ ಪರಿಚಯ
  • ಮಾರ್ಗದರ್ಶಕರ ಪರಿಚಯ
  • ಟರ್ಕಿ ಕೋಳಿ ಸಾಕಾಣಿಕೆ ಬಗ್ಗೆ
  • ಅಗತ್ಯ ಬಂಡವಾಳ, ಶೆಡ್ ನಿರ್ಮಾಣ, ಲೈಸೆನ್ಸ್
  • ಮರಿಗಳು ಮತ್ತು ಬೆಳವಣಿಗೆ ಹಂತ
  • ಕಾರ್ವಿುಕರ ಅಗತ್ಯತೆ, ಹವಾಮಾನ ಮತ್ತು ನಿರ್ವಹಣೆ
  • ಆಹಾರ, ನೀರು ಮತ್ತು ಆರೈಕೆ
  • ರೋಗಗಳು, ವ್ಯಾಕ್ಸಿನೇಷನ್
  • ಮಾಂಸ, ಮೊಟ್ಟೆ ಮತ್ತು ಸಾಗಾಣಿಕೆ
  • ಖರ್ಚು ಮತ್ತು ಲಾಭ
  • ಮಾರುಕಟ್ಟೆ ಮತ್ತು ರಫ್ತು
  • ಮಾರಾಟ (ರಿಟೇಲ್, ಆನ್​ಲೈನ್/ಆಫ್​ಲೈನ್)
  • ಮಾರ್ಗದರ್ಶಕರ ಸಲಹೆ

ಉದ್ಯೋಗಾವಕಾಶ ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ ffreedom appನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್​ ಕಾಲ್ ಮಾಡಿ - 02262116777

ffreedom appನಲ್ಲಿ ಟರ್ಕಿ ಕೋಳಿ ಸಾಕಣೆ ಕೋರ್ಸ್

ಪ್ರತಿಯೊಬ್ಬರು ಆರ್ಥಿಕ ಸ್ವಾತಂತ್ರ್ಯ ಕಂಡುಕೊಳ್ಳಬೇಕು ಎಂಬ ಉದ್ದೇಶ ಹೊಂದಿರುವ ಫ್ರೀಡಂ ಆಪ್ ಟರ್ಕಿ ಕೋಳಿ ಸಾಕಾಣಿಕೆ ಬಗ್ಗೆ ಸಂಪೂರ್ಣ ಮಾಹಿತಿ ಒಳಗೊಂಡ ಕೋರ್ಸ್ ಅನಾವರಣ ಮಾಡಿದೆ. ಕೋಳಿ ಸಾಕಾಣಿಕೆಯಲ್ಲಿ ಯಶಸ್ವಿಯಾದ ವಿಜಯ್​ಕುಮಾರ್ ಮಾರ್ಗದರ್ಶನ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net