

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮೈಸೂರು ದಸರಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ತುಮಕೂರು ಮೂಲದ ವ್ಯಕ್ತಿಗಾಗಿ ಸಿಸಿಬಿ ಪೊಲೀಸರು ಶೋಧಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಸೀನಾ ಹಿಂದೂಸ್ತಾನಿ ಸೇವಾ ಎಂಬ ಖಾತೆಯಲ್ಲಿ ಮಹಿಷಾಸುರ ಪ್ರತಿಮೆ ಫೋಟೋ ಎಡಿಟ್ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋ ಹಾಕಿ ಅವಹೇಳನ ಮಾಡಲಾಗಿತ್ತು. ಮುಂದಿನ ವರ್ಷ ತೋಲಾಂಡಿಗಳು ಸೇರಿಕೊಂಡು ಸಿದ್ಧ ದಸರಾ ಮಾಡಿದರೂ ಅಚ್ಚರಿ ಇಲ್ಲ ಎಂದು ಟ್ಯಾಗ್ ಲೈನ್ ನೀಡಲಾಗಿತ್ತು.
ಈ ಸಂಬಂಧ ಕಾಂಗ್ರೆಸ್ ವಕ್ತಾರ ಸೂರ್ಯ ಮುಕುಂದರಾಜ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ಸಿಸಿಬಿ ವರ್ಗಾವಣೆಯಾದ ಬೆನ್ನಲ್ಲೇ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಅವಹೇಳನಕಾರಿ ಪೋಸ್ಟ್ ಮಾಡಿದ್ದ ತುಮಕೂರು ಜಿಲ್ಲೆ ವ್ಯಕ್ತಿಯ ಬಂಧನಕ್ಕೆ ತೀವ್ರ ಶೋಧಿಸುತ್ತಿದ್ದಾರೆ.