ಬರೋಬ್ಬರಿ 15 ವರ್ಷಗಳ ನಂತರ ಜನಗಣತಿ ಪ್ರಕ್ರಿಯೆ ನಡೆಯುತ್ತಿದ್ದು, ದೇಶಾದ್ಯಂತ ಏಕಕಾಲದಲ್ಲಿ ಗಣತಿಯ ಭಾಗವಾಗಿ ಏ.15ರವರೆಗೆ ಆನ್‌ಲೈನ್ ಮೂಲಕ ಸ್ವಯಂ ಗಣತಿ ನಡೆದಿತ್ತು. ಅದಾದ ಬಳಿಕ ಏ.16ರಿಂದ ಮೇ 15ರವರೆಗೆ ಮನೆಪಟ್ಟಿ ಹಾಗೂ ಮನೆಗಣತಿ ಮಾಡಬೇಕಿದೆ. ಮಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ತಾಪಂ ಗ್ರಾಮಾಂತರ ವ್ಯಾಪ್ತಿಯ 236 ಹೌಸ್ ಲಿಸ್ಟಿಂಗ್ ಬ್ಲಾಕ್ (ಎಚ್.ಎಲ್‌ಬಿ) ಗಳಲ್ಲಿ ಗಣತಿ ಪೂರ್ಣಗೊಂಡಿದ್ದು, ಶೇ.100ರಷ್ಟು ಗುರಿ ಸಾಧನೆ ಮಾಡಲಾಗಿದೆ. ಬಜಪೆ ವ್ಯಾಪ್ತಿಯ 53 ಹೌಸ್ ಲಿಸ್ಟಿಂಗ್ ಬ್ಲಾಕ್ (ಎಚ್.ಎಲ್‌ಬಿ) ಗಳಲ್ಲಿ ಗಣತಿ ಪೂರ್ಣಗೊಂಡಿದ್ದು, ಶೇ.100ರಷ್ಟು ಗುರಿ ಸಾಧನೆ ಮಾಡಲಾಗಿದೆ. ಆದರೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯೋಜಿತ ಗುರಿ ಇನ್ನೂ ತಲುಪದ್ದು, ನಗರ ವ್ಯಾಪ್ತಿಯಲ್ಲಿ ಮನೆಗಣತಿ ಕಾರ್ಯಕ್ಕೆ ತುಸು ಹಿನ್ನಡೆಯಾಗಿದೆ.