

ಮಂಗಳೂರು: ಮೇರಿಹಿಲ್ನಲ್ಲಿರುವ ಗೃಹರಕ್ಷಕ ದಳ ಜಿಲ್ಲಾ ಕಚೇರಿಯಲ್ಲಿ ಗುರುವಾರ ಕಣಚೂರು ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಗೃಹರಕ್ಷಕ ದಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ, ಮಾಹಿತಿ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.
ಶಿಬಿರದಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣೆ, ರಕ್ತಹೀನತೆ ತಪಾಸಣೆ, ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ಸಹಿತ ಇತರ ದೇಹ ಪರೀಕ್ಷೆ ನಡೆಸಿ ಸೂಕ್ತ ಸಲಹೆ ಮತ್ತು ಔಷಧಗಳನ್ನು ಕೊಡಲಾಯಿತು. ಒಳರೋಗಿಯಾಗಿ ಚಿಕಿತ್ಸೆ ಬೇಕಾದವರಿಗೆ ಕಾಲೇಜು ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ಮಾಹಿತಿ ನೀಡಲಾಯಿತು.
ಜಿಲ್ಲಾ ಗೃಹರಕ್ಷಕ್ದಳದ ಮುಖ್ಯ ಅಧಿಕಾರಿ ಡಾ. ಮುರಲೀ ಮೋಹನ ಚೂಂತಾರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಕಣಚೂರು ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಹಾಗೂ ಶಸ್ತ್ರ ಚಿಕಿತ್ಸಕ ಡಾ.ಸುರೇಶ ನೆಗಳಗುಳಿ ಆಶಯ ಭಾಷಣ ಮಾಡಿದರು.
ಉಪ ವೈದ್ಯಕೀಯ ಅಧೀಕ್ಷಕ ಡಾ. ಕಾರ್ತಿಕೇಯ ಪ್ರಸಾದ,ವೈದ್ಯರಾದ ವೇದಂ ಆಯುರ್ವೇದ ಮುಖ್ಯಸ್ಥ ಡಾ. ಕೇಶವ ರಾಜ್, ಇತರ ವೈದ್ಯರಾದ ಡಾ. ಅಂಜಲಿ ಶೇಖರ, ಡಾ. ಗಾಯತ್ರಿ ಸಂಜೀವನ್ ಹಾಗೂ ಶುಶ್ರೂಶಕಿಯರಾದ ಅಲ್ವೀರಾ ಪಾಯಸ್,ಎಂ.ಆರ್.ಡಿ ವಿಭಾಗದ ರಶ್ಮಿಕಾ, ಫಾರ್ಮಸಿ ವಿಭಾಗದ ಸಾನಿಯಾ, ಲ್ಯಾಬ್ ಪರೀಕ್ಷಕ ಮಹಮ್ಮದ್ ಶಕೀರಾ ಶಿಬಿರ ನಡೆಸಿಕೊಟ್ಟರು.
ಎಲ್ಲಾ ಗೃಹರಕ್ಷಕ ದಳದ ಸಿಬ್ಬಂದಿಯವರಿಗೆ ಮಲೇರಿಯಾ ಪರೀಕ್ಷೆ ಮಾಡಿ,ಸೊಳ್ಳೆ ಪರದೆಗಳನ್ನೂ ಉಚಿತವಾಗಿ ನೀಡಲಾಯಿತು.