ಮಂಗಳೂರಲ್ಲಿ ಗಾಂಜಾ ಪ್ರಕರಣ: ಇಬ್ಬರು ವೈದ್ಯರು, 7 ವೈದ್ಯಕೀಯ ವಿದ್ಯಾರ್ಥಿಗಳ ಅಮಾನತು

Doctor
Published on

ಮಂಗಳೂರು: ಗಾಂಜಾ ಪ್ರಕರಣದಲ್ಲಿ ಇಬ್ಬರು ವೈದ್ಯರು ಮತ್ತು 7 ವೈದ್ಯಕೀಯ ವಿದ್ಯಾಥಿಗಳ ವಿರುದ್ಧ ಕೆ.ಎಂ.ಸಿ.‌ ಆಸ್ಪತ್ರೆ ಆಡಳಿತ ಮಂಡಳಿ ಶಿಸ್ತುಕ್ರಮ ಜರುಗಿಸಿದೆ. ಎಲ್ಲರನ್ನೂ ಅಮಾನತು ಮಾಡಿದೆ.

ಅತ್ತಾವರದ ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ.ಸಮೀರ್ ಮತ್ತು ಉಡುಪಿಯ ಮಣಿಪಾಲ ಕೆಎಂಸಿ ಮೆಡಿಕಲ್ ಸರ್ಜನ್ ಡಾ.ಮಣಿಮಾರನ್ ಮುತ್ತು ಅವರನ್ನ ಕೆಲಸದಿಂದಲೇ ಅಮಾನತು ಮಾಡಲಾಗಿದೆ.

ವೈದ್ಯಕೀಯ ವಿದ್ಯಾರ್ಥಿಗಳಾದ ಡಾ‌.ಕಿಶೋರಿಲಾಲ್, ಡಾ‌‌.ನದೀಯಾ ಸಿರಾಜ್(24), ಡಾ.ವರ್ಷಿಣಿ ಪ್ರತಿ(26), ಡಾ.ರಿಯಾ ಚಡ್ಡ(22), ಡಾ.ಇರಾ ಬಾಸಿನ(23), ಡಾ.ಕ್ಷಿತಿಜ್ ಗುಪ್ತ(25), ಡಾ.ಹರ್ಷಕುಮಾರ್ ವಿ.ಎಸ್‌. ಅವರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್​ಗೆ ಕೆಎಂಸಿ ಡೀನ್ ಉನ್ನಿಕೃಷ್ಣನ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net