

ಬೆಳ್ತಂಗಡಿ: ನಾವು ಮನಸ್ಸಿನಿಂದ ಉತ್ತಮ ವ್ಯಕ್ತಿಯಾಗಲು ಬಯಸಬೇಕು. ಉತ್ತಮ ಕಾರ್ಯಗಳಿಗಾಗಿ ಸಮಯ ಮೀಸಲಿಡಬೇಕು. ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಸೇವಾ ಯೋಜನೆಯ ಮಂಗಳೂರು ವಿಭಾಗಾಧಿಕಾರಿ ಸವಿತಾ ಎರ್ಮಾಳ್ ಹೇಳಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿಗೆ ಅಧಿಕೃತ ಭೇಟಿ ನೀಡಿ ಮಾತನಾಡಿದರು.
ಪ್ರಾಚಾರ್ಯ ಪ್ರಮೋದ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಕೆಯೊಂದಿಗೆ ಸಮಾಜ ಸೇವಾ ಗುಣಗಳನ್ನು ಈಗಿನಿಂದಲೇ ಮೈಗೂಡಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಅತ್ಯಂತ ಸೂಕ್ತ ವೇದಿಕೆ ಎಂದರು.
ಸವಿತಾ ಎರ್ಮಾಳ್ ಅವರನ್ನು ಗೌರವಿಸಲಾಯಿತು. ರಾ.ಸೇ.ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್, ಸಲಹಾ ಸಮಿತಿಯ ಸದಸ್ಯ ರಾಜೇಶ್ ಕಲ್ಲಬೆಟ್ಟು, ಘಟಕದ ನಾಯಕರಾದ ಆದಿತ್ಯ, ಪ್ರಾಪ್ತಿ ಗೌಡ ಉಪಸ್ಥಿರಿದ್ದರು.
ಶ್ರಾವಣಿ ಸ್ವಾಗತಿಸಿದರು. ಆದಿತ್ಯ ವಂದಿಸಿದರು. ಮೇಧಾ ಕುಂದಾಡಿ ಕಾರ್ಯಕ್ರಮ ನಿರೂಪಿಸಿದರು.