

ಮಂಗಳೂರು: ಮಂಗಳೂರು ನಗರದಲ್ಲಿ ಅಪಾಯಕಾರಿ ಕಾಲುವೆಗೆ ಜೀವ ಬಲಿಯಾಗಿದೆ. ಅದೇ ಸರದಿಯಲ್ಲಿ ಇಲ್ಲಿನ ಫುಟ್‌ಪಾತ್‌ಗಳು ಬಾಯ್ದೆರೆದು ನಿಂತಿವೆ. ಪಾದಚಾರಿಗಳು ಒಳ ಬಿದ್ದರೆ ಸಾವೇ ಗತಿ. ಗಂಭೀರತೆಯ ಅರಿವಿದ್ದರೂ ಪಾಲಿಕೆ ಮೌನ ವಹಿಸಿದೆ.
ಸುಮಾರು ಆರು ಅಡಿ ಆಳವಿರುವ ಈ ಚರಂಡಿಗೆ ಬಿದ್ದರೆ ದೇವರೇ ಕಾಪಾಡಬೇಕು. ಕುಂಟಿಕಾನದಿಂದ ದೇರೆಬೈಲ್‌ಗೆ ಹೋಗುವ ಮುಖ್ಯ ರಸ್ತೆಯಲ್ಲಿ ಹಲವು ಫುಟ್‌ಪಾತ್‌ಗಳು ಚರಂಡಿಯೊಳಗೆ ಬಿದ್ದಿವೆ. ಬಿಜೈ ಚರ್ಚ್ ರಸ್ತೆಯ ವಿವೇಕಾನಂದ ಪಾರ್ಕ್ ಬಳಿ ಫುಟ್‌ಪಾತ್ ಸ್ಲಾೃಬ್‌ಗಳು ಎದ್ದು ಹೋಗಿ ಅಪಾಯಕಾರಿಯಾಗಿವೆ. ಪಾದಚಾರಿಗಳು ನೇರವಾಗಿ ಬಂದರೆ ಒಳಗೆ ಬೀಳುವುದು ಖಚಿತ.
ನಗರದಲ್ಲಿ ಇಂತಹ ಫುಟ್‌ಪಾತ್ ಗುಂಡಿಗಳಿಗೆ ಬಿದ್ದು ಸಾವು ಸಂಭವಿಸಬೇಕು. ಬಳಿಕವೇ ಸರಿಪಡಿಸುವ ಎಂದು ಪಾಲಿಕೆ ಕಾಯುತ್ತಿದೆಯೋ? ಎನ್ನುವ ಸಂಶಯ ಕಾಡುತ್ತಿದೆ. ಜನಪ್ರತಿನಿಧಿಗಳ ಸೂಚನೆಗೂ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ ಎನ್ನುವುದನ್ನು ಒಪ್ಪಿಕೊಂಡಂತಾಗಿದೆ.
ಬಿಜೈ-ಕೊಡಿಯಾಲಗುತ್ತು ರಸ್ತೆ, ಕದ್ರಿ ಕಂಬಳ, ಬಂಟ್ಸ್ ಹಾಸ್ಟೆಲ್, ಮಣ್ಣಗುಡ್ಡೆ ಸೇರಿದಂತೆ ನಗರದ 15ಕ್ಕೂ ಅಧಿಕ ಕಡೆ ಜನ ಓಡಾಡುವ ಸ್ಥಳಗಳಲ್ಲಿ ಇಂತಹ ಅಪಾಯಕಾರಿ ಹೊಂಡಗಳು ಕಂಡು ಬಂದಿವೆ. ಇಲ್ಲಿ ನಿತ್ಯ ನೂರಾರು ಮಂದಿ ನಡೆದಾಡುತ್ತಾರೆ. ಬಳಿಯಲ್ಲೇ ಶಾಲೆಗಳೂ ಇರುವುದರಿಂದ ಮಕ್ಕಳು ಈ ಫುಟ್‌ಪಾತ್‌ಗಳಲ್ಲೇ ನಡೆಯುತ್ತಾರೆ.
ಬೆಳಗ್ಗೆ ಮತ್ತು ಸಂಜೆಯ ವೇಳೆ ವಾಕಿಂಗ್ ಹೋಗುವವರು ಈ ಫುಟ್‌ಪಾ
ತ್ ಬಳಸುತ್ತಾರೆ. ಈಗಾಗಲೇ ಹಲವು ಮಂದಿ ಸ್ಲಾೃಬ್ ತುಂಡಾಗಿ ಒಳಗೆ ಬಿದ್ದು ಗಾಯಮಾಡಿಕೊಂಡಿದ್ದಾರೆ. ಈ ಬಗ್ಗೆ ಪಾಲಿಕೆ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಇಲ್ಲಿ ನಿತ್ಯ ನಡೆದಾಡುವ ಪ್ರದೀಪ್ ದೂರಿದ್ದಾರೆ.
ಈ ಫುಟ್‌ಪಾತ್ ನಿರ್ಮಾಣಗೊಂಡು ನಾಲ್ಕೈದು ವರ್ಷಗಳಷ್ಟೇ ಆಗಿವೆ. ಇದಕ್ಕೆ ಅಳವಡಿಸಿ ಸ್ಲಾೃಬ್ ತೀರಾ ಕಳಪೆ ಆಗಿರುವ ಕಾರಣ ಮುರಿದು ಬೀಳುತ್ತಿದೆ. ಸ್ಲಾೃಬ್ ಒಳಗಿನ ಕಬ್ಬಿಣ ತುಕ್ಕು ಹಿಡಿದು ತುಂಡಾದಾಗ ಸ್ಲಾೃಬ್ ಕೂಡಾ ತುಂಡಾಗಿ ಬೀಳುತ್ತಿದೆ ಎನ್ನುತ್ತಾರೆ ಸ್ಥಳೀಯರು.
‘ಫುಟ್‌ಪಾತ್‌ನ ಸ್ಲಾೃಬ್ ಕಿತ್ತು ಹೋಗಿರುವ ಕಡೆ ಪಾದಚಾರಿಗಳಿಗೆ ತೊಂದರೆಯಾಗದಂತೆ ಶೀಘ್ರದಲ್ಲೇ ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಸುಧೀರ್ ಶೆಟ್ಟಿ ಕಣ್ಣೂರು
ಮೇಯರ್