ಮಾಂಗಲ್ಯ ಭಾಗ್ಯ ಸಾಮೂಹಿಕ ವಿವಾಹಕ್ಕೆ ದಿನಾಂಕ ನಿಗದಿ

BBT
Published on

ಬೆಂಗಳೂರು: ಸರಳ ವಿವಾಹ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಸಾಮೂಹಿಕ ವಿವಾಹ ಯೋಜನೆಗೆ ‘ಮಾಂಗಲ್ಯ ಭಾಗ್ಯ’ ಎಂದು ಮರುನಾಮಕರಣ ಮಾಡಿ, ವಿವಾಹಕ್ಕೆ ನೀಡಲಾಗುವ ಆರ್ಥಿಕ ನೆರವನ್ನು 60 ಸಾವಿರ ರೂ.ಗೆ ಹೆಚ್ಚಿಸಲಾಗಿದೆ.

ಯೋಜನೆಯಡಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಎ ಮತ್ತು ಬಿ ವರ್ಗದ ಪ್ರಮುಖ ದೇವಾಲಯಗಳಲ್ಲಿ ವಿವಾಹ ನಡೆಯಲು ದಿನಾಂಕ ನಿಗದಿಪಡಿಸಿ ಸುತ್ತೋಲೆ ಹೊರಡಿಸಲಾಗಿದೆ.

ನವೆಂಬರ್ ತಿಂಗಳ ಧನುರ್ ಅಥವಾ ಅಭಿಜಿನ್ ಲಗ್ನದಲ್ಲಿ ನ. 14ರಂದು ಬೆಳಗ್ಗೆ 9.40 ರಿಂದ 10.40ರವರೆಗೆ ಅಥವಾ 11.25 ರಿಂದ 12.20ರವರೆಗಿನ, ನ. 19ರ ಭಾನುವಾರ ಬೆಳಗ್ಗೆ 9.45 ರಿಂದ 10.35ರವರೆಗೆ ಅಥವಾ 11.20 ರಿಂದ 12ರವರೆಗೆ, ನ. 29ರ ಬುಧವಾರ ಬೆಳಗ್ಗೆ 9 ರಿಂದ 9.50ರವರೆಗೆ ಅಥವಾ 11.20 ರಿಂದ 12ರವರೆಗೆ ಸಾಮೂಹಿಕ ವಿವಾಹ ನಡೆಸಲು ಸಮಯ ನಿಗದಿಪಡಿಸಲಾಗಿದ್ದು, ವಧು ವರರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಡಿ. 7 ಮತ್ತು 10ರಂದು ಅಭಿಜಿನ್ ಲಗ್ನದಲ್ಲಿ ಬೆಳಗ್ಗೆ 11.25 ರಿಂದ 12ರವರೆಗೆ ಹಾಗೂ ಜ. 28 ಮತ್ತು 31ರಂದು ಅಭಿಜಿನ್ ಲಗ್ನದಲ್ಲಿ ಬೆಳಗ್ಗೆ 11.20 ರಿಂದ 12.20ರವರೆಗೆ ಸಮಯ ನಿಗದಿ ಪಡಿಸಲಾಗಿದೆ. ಈ ದಿನಗಳಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸಂಬಂಧಪಟ್ಟ ದೇವಾಲಯಗಳಿಗೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net