ವಾರಕ್ಕೆ 2 ಬಾರಿ ಮನೆಗೆ ಬರ್ತಿದ್ದ ಗಂಡನಿಗೆ ಪತ್ನಿಯ ಮೇಲೆ ಶುರುವಾದ ಸಂಶಯ ಭೀಕರ ಹತ್ಯೆಯಲ್ಲಿ ಅಂತ್ಯ

Mandya Man Kills Wife
Published on

ಮಂಡ್ಯ: ಸಂಶಯ ಪಿಶಾಚಿ ಎನ್ನುವುದು ಎಂಥ ನೀಚ ಕೃತ್ಯಗಳನ್ನು ಮಾಡಿಸುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಈ ಘಟನೆ. ದೂರದ ಊರಿಗೆ ಕೆಲಸಕ್ಕೆ ಹೋಗುತ್ತಿದ್ದ ಗಂಡ ಪತ್ನಿಯ ಶೀಲದ ಮೇಲೆ ಸಂಶಯಪಟ್ಟು ಮನೆಗೆ ಬಂದಾಗ ಆಕೆಯನ್ನು ಕೊಲೆ ಮಾಡಿದ್ದಾನೆ.

ಈ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲದ ಟಿಬಿ ಬಡಾವಣೆಯಲ್ಲಿ ನಡೆದಿದೆ. ಮಧುಶ್ರೀ (25) ಕೊಲೆಯಾದ ಮಹಿಳೆ. ಮಂಜುನಾಥ್ ಕೊಲೆಗೈದ ಪಾಪಿ ಪತಿ. ದಂಪತಿ ಒಂದೂವರೆ ವರ್ಷದಿಂದ ಟಿಬಿ ಬಡಾವಣೆಯಲ್ಲಿ ನಾಲ್ಕು ವರ್ಷ ಗಂಡು ಮಗು ವಾಸವಿದ್ದರು.

ಮಂಜುನಾಥ್ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ. ವಾರದಲ್ಲಿ 2 ಬಾರಿಗೆ ಮನೆಗೆ ಬರ್ತಿದ್ದ. ನಿನ್ನೆ ಮಧ್ಯಾಹ್ನ ಮಂಜುನಾಥ್​ ಮನೆಗೆ ಬಂದಿದ್ದ. ಈ ವೇಳೆ ಮಧುಶ್ರೀ ನಡುವೆ ಜಗಳ ನಡೆದಿತ್ತು. ಪತ್ನಿಯ ಶೀಲವನ್ನು ಶಂಕಿಸಿ ತಾನೇ ಜಗಳ ಆರಂಭಿಸಿದ್ದ ಮಂಜುನಾಥ್​ ಕೊನೆಗೆ ಆಕೆಯನ್ನು ಕೊಂದು ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ನಾಗಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net