ಗಂಡನ ಬಳಿ ಡಿವೋರ್ಸ್​ಗೆ ಒತ್ತಾಯ: ಮಂಡ್ಯದ ಮಾಜಿ ಶಾಸಕನ ಸಹೋದರನ ಜತೆ ಸಿಕ್ಕಿ ಬಿದ್ದ ಮಹಿಳೆ

Mandya EX MLA Brother KB Ravi
ಮಹಿಳೆ ಜೊತೆ ಸಿಕ್ಕಿಬಿದ್ದ ಕೆ ಬಿ ರವಿ
Published on

ಮಂಡ್ಯ: ವಿವಾಹಿತ ಪರಸ್ತ್ರೀ ಜತೆ ಇರುವಾಗ ಆಕೆಯ ಕುಟುಂಬಸ್ಥರ ಕೈಗೆ ಮಾಜಿ ಶಾಸಕರೊಬ್ಬರ ಸಹೋದರ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಘಟನೆ ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.

ಕೆ.ಬಿ. ರವಿ, ವಿವಾಹಿತ ಪರಸ್ತ್ರಿ ಜೊತೆ ಲಾಕ್​ ಆದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರ ಸಹೋದರ. ರವಿಗೆ ಸಂಬಂಧಿಸಿದ ಕಮರ್ಷಿಯಲ್ ಬಿಲ್ಡಿಂಗ್​ನಲ್ಲಿ ಮಹಿಳೆ ಬ್ಯೂಟಿ ಪಾರ್ಲರ್ ಇಟ್ಟುಕೊಂಡಿದ್ದಳು. ಆಕೆಯೊಂದಿಗೆ ಕೆ.ಬಿ.ರವಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಅತ್ತ ಗಂಡನಿಗೆ ಪದೇಪದೆ ಡಿವೋರ್ಸ್ ಕೊಡು ಅಂತಾ ಆಕೆ ಪೀಡಿಸುತ್ತಿದ್ದಳು. ಇದು ಅವರ ಕುಟುಂಬಸ್ಥರ ಅನುಮಾನಕ್ಕೆ ದಾರಿ ಮಾಡಿಕೊಟ್ಟಿತ್ತು.

ಕೆ.ಬಿ.ರವಿ ಅವರ ಮನೆಯಲ್ಲಿ ಯಾರು ಇಲ್ಲದ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ಮಹಿಳೆ ರವಿ ಮನೆಗೆ ಸೇರಿದ್ದಳು. ಆಕೆ ರಾತ್ರಿ ಮನೆಗೆ ಬಾರದ ಹಿನ್ನಲೆಯಲ್ಲಿ ಮಹಿಳೆಯ ಕುಟುಂಬಸ್ಥರು ಕೆ.ಬಿ.ರವಿ ಅವರ ಮನೆ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಇಬ್ಬರು ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಮಹಿಳೆಗೆ ಆಕೆಯ ಕುಟುಂಬಸ್ಥರು ಥಳಿಸಿದ್ದಾರೆ.

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net