ಗಾಯಕ ಕಿಕ್ಕೇರಿ ಕೃಷ್ಣಮೂರ್ತಿಗೆ ಪರಿಸರ ರತ್ನ ಪ್ರಶಸ್ತಿ

ಕಿಕ್ಕೇರಿ ಹೋಬಳಿಯ ಊಗಿನಹಳ್ಳಿ ಗ್ರಾಮದಲ್ಲಿ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅವರಿಗೆ ಮಂಗಳವಾರ ಪರಿಸರ ಸಂರಕ್ಷಣಾ ಸಮಿತಿಯಿಂದ ಪರಿಸರ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ವೆಂಕಟೇಶ್, ಅಭಿಷೇಕ್, ಪುಟ್ಟೇಗೌಡ, ಮಹೇಶ್, ಶಿಲ್ಪಾ, ಬಸವರಾಜು, ಕಾವೇರಮ್ಮ, ಮಹದೇವಪ್ಪ ಇದ್ದರು.
ಕಿಕ್ಕೇರಿ ಹೋಬಳಿಯ ಊಗಿನಹಳ್ಳಿ ಗ್ರಾಮದಲ್ಲಿ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅವರಿಗೆ ಮಂಗಳವಾರ ಪರಿಸರ ಸಂರಕ್ಷಣಾ ಸಮಿತಿಯಿಂದ ಪರಿಸರ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ವೆಂಕಟೇಶ್, ಅಭಿಷೇಕ್, ಪುಟ್ಟೇಗೌಡ, ಮಹೇಶ್, ಶಿಲ್ಪಾ, ಬಸವರಾಜು, ಕಾವೇರಮ್ಮ, ಮಹದೇವಪ್ಪ ಇದ್ದರು.
Published on
ಕಿಕ್ಕೇರಿ: ಪರಿಸರ ಉಳಿದರೆ ನಾವು ನೀವು ಎಂಬ ಪರಿಕಲ್ಪನೆ ಮೂಡಲು ಹಳ್ಳಿಗಾಡಿನಲ್ಲಿರುವ ಮುಗ್ಧ ಜನರ ಪ್ರಕೃತಿ ಪ್ರೇಮವೇ ಕಾರಣವಾಗಿದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಪರಿಸರ ಪ್ರೇಮಿ ಡಾ. ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.
ಹೋಬಳಿಯ ಊಗಿನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಪರಿಸರ ಸಂರಕ್ಷಣಾ ಸಮಿತಿ ಮಂಗಳವಾರ ನೀಡಿದ ಪರಿಸರ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ತನ್ನ ಬದುಕು ಗಾಯನ ಕ್ಷೇತ್ರ ಎಂದು ಕೊಂಡಿದ್ದೆ. ತಾನು ಹುಟ್ಟಿದ ಕಿಕ್ಕೇರಿಯ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಒಡನಾಟ ಹೆಚ್ಚು ಬೆಳೆಸಿಕೊಂಡೆ. ಪರಿಣಾಮ ಗಾಯನ ಕ್ಷೇತ್ರದಷ್ಟೆ ಸಮಾಜಕ್ಕೆ ಪರಿಸರ ಉಳಿವು ಮುಖ್ಯ ಎಂದು ಅರಿತೆ. ಸಾಲುಮರದ ತಿಮ್ಮಕ್ಕ, ಸ್ಥಳೀಯ ಊಗಿನಹಳ್ಳಿ ವೆಂಕಟೇಶ್ ಅವರಂತಹ ಪರಿಸರ ಪ್ರೇಮಿಗಳನ್ನು ಕಣ್ಣಾರೆ ಕಂಡೆ. ತನ್ನ ಬದುಕನ್ನು ಗಾಯನದ ಜತೆಯಲ್ಲಿ ಪರಿಸರ, ಸರ್ಕಾರಿ ಶಾಲೆ, ಕನ್ನಡ ಶಾಲೆ ಉಳಿಸಲು ಮೀಸಲಾಗಿಸಲು ಯಜ್ಞ ತೊಟ್ಟಿರುವೆ ಎಂದರು.
ಶಾಲಾ ಮಕ್ಕಳಿಗೆ ಪರಿಸರಪ್ರೇಮಿ, ಗಾಯಕರು ಪರಿಸರ ಗೀತೆಯನ್ನು ಹೇಳಿಕೊಟ್ಟು ಜತೆಯಲ್ಲಿ ಹಾಡಿ ಪರಿಸರ ಜಾಗೃತಿ ಮೂಡಿಸಿದರು. ಮಕ್ಕಳು ಪ್ರತಿಜ್ಞೆ ಮಾಡಿ ಪರಿಸರ ಉಳಿಸಲು ಗಿಡನೆಟ್ಟು ಬೆಳೆಸಿ ಉಳಿಸುವುದಾಗಿ ತಿಳಿಸಿದರು. ಶಾಲಾವರಣದಲ್ಲಿ ಗ್ರಾಮದ ಮುಖಂಡರು ಹಣ್ಣು ಹಂಪಲು ಗಿಡ ಗಾಯಕರೊಂದಿಗೆ ನೆಟ್ಟು ನೀರೆರೆದರು.
ಪರಿಸರ ಪ್ರೇಮಿ ವೆಂಕಟೇಶ್, ಕಲಾವಿದರಾದ ಅಭಿಷೇಕ್ ರಾಂಪ್ರಸಾದ್, ಮುಖ್ಯಶಿಕ್ಷಕ ಪುಟ್ಟೇಗೌಡ, ಶಿಕ್ಷಕರಾದ ಮಹೇಶ್, ಶಿಲ್ಪಾ, ಮುಖಂಡರಾದ ಬಸವರಾಜು, ನಿಂಗೇಗೌಡ, ಮಂಜುನಾಥಶೆಟ್ಟಿ, ಮಂಜೇಗೌಡ, ಮಹದೇವಪ್ಪ, ದಿಲೀಪ್, ಕಾವೇರಮ್ಮ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net