

ಪಟನಾ: ಬಿಹಾರ ವಿಧಾನಸಭಾ ಚುನಾವಣೆ 2020ರ ಜನಾದೇಶದ ಫಲಿತಾಂಶ ಎನ್ಡಿಎ ಆಡಳಿತಕ್ಕೆ ವಿರುದ್ಧವಾಗಿ ಬಂದಿದೆ. ಆದರೂ ಸರ್ಕಾರ ರಚನೆ ಮಾಡುತ್ತಿದ್ದಾರೆ. ನಿತೀಶ್ ಕುಮಾರ್ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಪಕ್ಷದ ಯಾವುದೇ ನಾಯಕರು ಭಾಗಿಯಾಗುವುದಿಲ್ಲ ಎಂದು ರಾಷ್ಟ್ರೀಯ ಜನತಾದಳ (ಆರ್ಜೆಡಿ ) ತಿಳಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಆರ್ಜೆಡಿ, ಕೈಗೊಂಬೆ ಸರ್ಕಾರದ ಅಧಿಕಾರ ಸ್ವೀಕಾರ ಸಮಾರಂಭವನ್ನು ಆರ್ಜೆಡಿ ಬಹಿಷ್ಕರಿಸುತ್ತದೆ. ಈ ಜನಾದೇಶ ಬದಲಾವಣೆಗೆ ಸಿಕ್ಕಿದ್ದಾಗಿತ್ತು. ಆಡಳಿತಾರೂಢ ಎನ್ಡಿಎಗೆ ವಿರುದ್ಧವಾಗಿ ಬಂದಿತ್ತು. ಜನಾದೇಶವನ್ನು ಆಡಳಿತಾರೂಢರು ಬದಲಾಯಿಸಿದ್ದಾರೆ.
ನಿರುದ್ಯೋಗಿಗಳನ್ನು, ಕೃಷಿಕರನ್ನು, ಗುತ್ತಿಗೆ ಕಾರ್ಮಿಕರನ್ನು, ಶಿಕ್ಷಕರನ್ನು ಕೇಳಿ ನೋಡಿ. ಅವರೆಷ್ಟು ಸಂಕಷ್ಟದಲ್ಲಿದ್ದಾರೆ ಅನ್ನೋದು ಗೊತ್ತಾಗುತ್ತೆ. ಎನ್ಡಿಎಯ ವಂಚನೆ ಬಗ್ಗೆ ಜನರಿಗೆ ಆಕ್ರೋಶವಿದೆ. ನಾವು ಜನಪ್ರತಿನಿಧಿಗಳು, ಜನರೊಂದಿಗೆ ನಿಲ್ಲುತ್ತೇವೆ ಎಂದು ಹೇಳುತ್ತ, ಅಸಹಾಯಕ ಸರ್ಕಾರದಲ್ಲಿ ಎರಡು ಅಸಹಾಯಕ ಪಕ್ಷಗಳಿವೆ ಎಂದು ಟೀಕಿಸಿದೆ.