ತಾನು ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್​​ನಿಂದಲೇ 50 ಮದ್ಯದ ಬಾಟಲಿಗಳನ್ನು ಎಗರಿಸಿದ ಮ್ಯಾನೇಜರ್​

Liquor
Published on

ಮುಂಬೈ: ತಾನು ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್​ನಲ್ಲೇ ಕಳವು ಮಾಡಿದ ಮ್ಯಾನೇಜರ್​ ವಿರುದ್ಧ ಇದೀಗ ದೂರು ದಾಖಲಾಗಿದೆ.

ದಕ್ಷಿಣ ಮುಂಬೈನಲ್ಲಿ ಇರುವ ರೆಸ್ಟೋರೆಂಟ್​ವೊಂದರಲ್ಲಿ ಘಟನೆ ನಡೆದಿದೆ. ಮ್ಯಾನೇಜರ್​ ತಾನು ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್​​ನಿಂದ 50 ಲಿಕ್ಕರ್​ ಬಾಟಲಿಗಳು, ಒಂದಷ್ಟು ಬಟರ್​, ಚೀಸ್​​​ನಂತಹ ಆಹಾರ ಸಾಮಗ್ರಿಗಳು, ಸುಶಿ ಚಾಕುಗಳು, ಮೈಕ್ರೋವೇವ್​ ಓವನ್​ಗಳನ್ನು ಕದ್ದೊಯ್ದಿದ್ದಾನೆ ಎಂದು ದೂರು ದಾಖಲು ಮಾಡಲಾಗಿದೆ.

ಈ ರೆಸ್ಟೊರೆಂಟ್​ ಹೆಸರು ಕೈಬಾ. ರೆಸ್ಟೋರೆಂಟ್​ ಮಾಲೀಕ ಅಫ್ತಾಬ್​ ಇಕ್ಬಾಲ್​ ಮೂನ್​. ಇವರು ಗುರುವಾರ ಆಕಸ್ಮಿಕವಾಗಿ ರೆಸ್ಟೋರೆಂಟ್​ಗೆ ಬಂದಾಗ ಅಲ್ಲಿ ಅನೇಕ ವಸ್ತುಗಳು ಇಲ್ಲದೆ ಇರುವುದು ಗಮನಕ್ಕೆ ಬಂದಿದೆ.

ರೆಸ್ಟೋರೆಂಟ್​​ನಲ್ಲಿ ಹಲವು ವಸ್ತುಗಳನ್ನು ಇಲ್ಲದಿರುವುದನ್ನು ಗಮನಿಸಿದ ಮಾಲೀಕ ಮೂನ್​ ಅವರು ಈ ಬಗ್ಗೆ ವಾಚ್​ಮನ್​ನ್ನು ಕೇಳಿದ್ದಾರೆ. ಆಗ ವಾಚ್​ಮನ್ ರೆಸ್ಟೋರೆಂಟ್​ ಮ್ಯಾನೇಜರ್​ ಜಾಕ್ಸನ್​ ಜಾನ್​ ಅವರು ಲಿಕ್ಕರ್​ ಬಾಟಲಿಗಳನ್ನು ಕೊಂಡೊಯ್ದಿದ್ದನ್ನು ನೋಡಿದ್ದಾಗಿ ಹೇಳಿದ್ದಾನೆ. ಇದನ್ನೂ ಓದಿ: ನವಿಲುತೀರ್ಥ ಡ್ಯಾಂನಿಂದ 10 ಸಾವಿರ ಕ್ಯೂಸೆಕ್ಸ್​ ನೀರು ಬಿಡುಗಡೆ: ಮಲಪ್ರಭಾ ನದಿ ತೀರದಲ್ಲಿ ಪ್ರವಾಹ ಭೀತಿ

ನಂತ ಮೂನ್​ ತನ್ನ ಉಳಿದ ಇಬ್ಬರು ಪಾರ್ಟ್ನರ್​​ಗಳಿಗೆ ವಿಷಯ ತಿಳಿಸಿದ್ದಾರೆ. ಮೂವರೂ ಕೂಡ ಜಾನ್​​ಗೆ ಕರೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈಗ ಎಲ್ಲರೂ ಸೇರಿ ಜಾನ್​​ರನ್ನು ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net