VIDEO| ಕಳ್ಳತನ ಶಂಕೆ; ಮ್ಯಾನೇಜರ್​ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ ಕೊಂದ ಮಾಲೀಕ

Delhi Crime
Published on

ಶಹಜಹಾನ್​ಪುರ್​​: ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ವ್ಯಕ್ತಿ ಒಬ್ಬನನ್ನು ಅಮಾನುಷವಾಗಿ ಹೊಡೆದು ಕೊಲೆ ಮಾಡಿ ಆತನ ಶವವನ್ನು ಸರ್ಕಾರಿ ಆಸ್ಪತ್ರೆ ಮುಂದೆ ಎಸೆದಿರುವ ಘಟನೆ ಉತ್ತರಪ್ರದೇಶದ ಶಹಜಹಾನ್​ಪುರದಲ್ಲಿ ನಡೆದಿದೆ.

ಶಿವಂ ಜೊಹ್ರಿ(32) ಮೃತ ದುರ್ದೈವಿ ಎಂದು ತಿಳಿದು ಬಂದಿದ್ದು. ಇವರನ್ನು ಕಂಬಕ್ಕೆ ಕಟ್ಟಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕಳ್ಳತನ ಶಂಕೆ

ಟ್ರಾನ್ಸ್​ಪೋರ್ಟ್​ ಕಂಪನಿ ಒಂದರಲ್ಲಿ ಮ್ಯಾನೇಜರ್​ ಆಗಿ ಏಳು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಶಿವಂ ಮೇಲೆ ಕಳ್ಳತನ ಆರೋಪ ಕೇಳಿ ಬಂದಿತ್ತು. ಈ ವಿಚಾರವಾಗಿ ಸಂಸ್ಥೆಯ ಮಾಲೀಕ ಬಂಕಿಮ್​ ಸೂರಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರನ್ನು ಹಿಡಿದು ಥಳಿಸಿ ಬಾಯಿ ಬಿಡಿಸಲು ಯತ್ನಿಸಿದ್ದಾರೆ.

ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಶಿವಂ ಮೃತಪಟ್ಟಿದ್ದು ಅವರ ದೇಹವನ್ನು ಸರ್ಕಾರಿ ಆಸ್ಪತ್ರೆ ಮುಂಭಾಗ ಎಸೆದು ಆರೋಪಿಗಳು ಪರಾರಿಯಾಗಿದ್ದರು.

ಕರೆಂಟ್​ ಹೊಡೆದು ಸಾವು

ಸರ್ಕಾರಿ ಆಸ್ಪತ್ರೆಯಲ್ಲಿ ಬಳಿ ಶಿವಂ ಶವ ದೊರೆತ ಬಗ್ಗೆ ಪೊಲೀಸರಿಗೆ ತಿಳಿಸಿದ್ದರು. ಈ ವೇಳೆ ಕುಟುಂಬಸ್ಥರು ಕರೆಂಟ್​ ಹೊಡೆದು ಮೃತಪಟ್ಟಿರುವುದಾಗಿ ತಿಳಿಸಿದ್ದರು.

ಶಿವಂ ದೇಹದ ಮೇಲೆ ಗಾಯದ ಗುರುತುಗಳನ್ನು ಗಮನಿಸಿದ ಪೊಲೀಸ್​ ಸಿಬ್ಬಂದಿ ತನಿಖೆ ಪ್ರಾರಂಭಿಸಿದ್ದಾರೆ.

ಪ್ರಕರಣ ದಾಖಲು

ಇತ್ತೀಚಿಗೆ ಕನ್ಹಿಯಾ ಹೊಸೈರಿ ಸಂಸ್ಥಗೆ ಸೇರಿದ್ದ ಪ್ಯಾಕೇಜ್​ ಒಂದು ಕಾಣೆಯಾಗಿತ್ತು. ಇದರ ಬಗ್ಗೆ ವಿಚಾರಿಸಲು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ಥಳಿಸಲಾಗಿದೆ.

ಘಟನೆ ಸಂಬಂಧ ಏಳು ಮಂದಿ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದ್ದು ಇದು ಟ್ರಾನ್ಸ್​ಪೋರ್ಟ್​​ ಸಂಸ್ಥೆ ಮಾಲೀಕ ಬಂಕಿಮ್​ ಸೂರಿ ಹಾಗೂ ಕನ್ಹಿಯಾ ಹೊಸೈರಿ ಮಾಲೀಕ ನೀರಜ್ ಗುಪ್ತಾ ಅವರನ್ನು ಹೆಸರಿಸಲಾಗಿದ್ದು ಆರೋಪಿಗಳು ತಲೆ ಮಾರಿಸಿಕೊಂಡಿದ್ದಾರೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net