'ಕಿರಾತಕ' ಸಿನಿಮಾ ಸ್ಟೈಲ್​ನಲ್ಲಿ ಪ್ರೀತ್ಸೇ ಪ್ರೀತ್ಸೇ ಎಂದು ಅಪ್ರಾಪ್ತ ವಯಸ್ಕಳ ದುಂಬಾಲು ಬಿದ್ದವನ ಬಂಧನ!

koppala sp
Published on

ಕೊಪ್ಪಳ: ಕಿರಾತಕ ಸಿನಿಮಾದ ಸ್ಟೈಲ್​ನಲ್ಲಿ ಹುಡಗಿಯನ್ನು ಪಟಾಯಿಸಲು ಹೋಗಿದ್ದ ಪಾಗಲ್ ಪ್ರೇಮಿಯನ್ನು ಇದೀಗ ಬಂಧಿಸಲಾಗಿದೆ.

ಇದೀಗ ಕೊಪ್ಪಳದ ಕನಕಗಿರಿಯ ಶಾಲಾ ಕಾಲೇಜಿನ ಗೋಡೆಗಳ ಮೇಲಿನ ಅಶ್ಲೀಲ ಬರಹಗಾರ ಮಹಿಬೂಬ ಸಿಕ್ಕಲಗಾರನನ್ನು ಪೊಲೀಸರು ಬಂಧಿಸಿದ್ದಾರೆ. ಅಂದ ಹಾಗೆ ಈತ, ಗೋಡೆಗಳ ಮೇಲೆ ಅಶ್ಲೀಲ ಬರಹ ಬರೆಯುವುದಕ್ಕೂ 'ಮಹತ್ತರ' ಕಾರಣವಿದೆ. ಈತ ಅಪ್ರಾಪ್ತಳ ಹಿಂದೆ ಪ್ರೀತ್ಸೇ ಪ್ರೀತ್ಸೇ ಎಂದು ಬಿದ್ದಿದ್ದ. ಆದರೆ ಹುಡಗಿ ಅವಾಯ್ಡ್ ಮಾಡುತ್ತಿದ್ದಳು ಎಂದು ಆತ ಗೋಡೆ ಮೇಲೆ ಅಶ್ಲೀಲವಾಗಿ ಹೆಸರು ಗೀಚುತ್ತಿದ್ದನಂತೆ!

ಶಾಲಾ ಕಾಲೇಜುಗಳ ಗೋಡೆಗಳಿಗಷ್ಟೇ ನಿಲ್ಲದ ಈತನ ಆಟಾಟೋಪ, ಫೇಕ್ ಇನಸ್ಟಾಂಗ್ರಾಮ್ ಅಕೌಂಟ್ ಮಾಡಿ ಪೋಸ್ಟ್ ಕೂಡ ಮಾಡುತ್ತಿದ್ದ! ಈತನ ಬರಹಕ್ಕೆ ಅಂಜುತ್ತಿದ್ದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬರಲು ಹಿಂಜರಿಯುತ್ತಿದ್ದರು! ಇತ್ತಿಚೆಗೆ ಶಾಲಾ ಗೋಡೆ ಬರಹದ ಪ್ರಕರಣ ಗಂಭೀರ ಸ್ವರೂಪ ಕೂಡ ಪಡೆದಿತ್ತು. ಈ ಕಿರಾತಕ 1 ವರ್ಷದಿಂದ ಪೊಲೀಸರಿಗೆ ತಲೆನೋವಾಗಿದ್ದು ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ಆರೋಪಿ ಬಂಧನದ ಕುರಿತು ಮಾಹಿತಿ ನೀಡಿದ ಎಸ್ಪಿ ಯಶೋಧ ವಂಟಿಗೋಡಿ "ಈ ಪ್ರಕರಣದ ಪತ್ತೆಗಾಗಿ ಎರಡು ತಂಡಗಳ ರಚನೆ ಮಾಡಿದ್ದರು" ಎಂದು ಹೇಳಿದ್ದಾರೆ. ಸದ್ಯ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು ಕಲಂ 504,505,506,507,509 ಐಪಿಸಿ 66(ಸಿ),67ಬಿ ಕಾಯ್ದೆಯಲ್ಲಿ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net