ಟೆಕ್ ಮಹೀಂದ್ರಾ ಮಾಜಿ ಉಪಾಧ್ಯಕ್ಷ ನಯ್ಯರ್ ಇನ್ನಿಲ್ಲ

vineet
Published on

ಮುಂಬೈ: ಟೆಕ್ ಮಹೀಂದ್ರಾ ಕಂಪನಿಯ ಮಾಜಿ ಉಪಾಧ್ಯಕ್ಷ ವಿನೀತ್ ನಯ್ಯರ್ ಅವರು 85 ನೇ ವಯಸ್ಸಿನಲ್ಲಿ ನಿಧನರಾದರು. ಟೆಕ್ ಮಹೀಂದ್ರಾದ ಮಾಜಿ ಎಂಡಿ ಮತ್ತು ಸಿಇಒ ಸಿ.ಪಿ. ಗುರ್ನಾನಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಈ ಸಂಗತಿ ಹಂಚಿಕೊಂಡಿದ್ದಾರೆ.

ಸ್ವಾತಂತ್ರೋತ್ತರ ಭಾರತದಲ್ಲಿ, ನವೆಂಬರ್ 21, 1947 ರಂದು ಭಾರತದಲ್ಲಿ ಜನಿಸಿದ ಅವರು, ಮ್ಯಾಸಚೂಸೆಟ್ಸ್‌ನ ವಿಲಿಯಮ್ಸ್ ಕಾಲೇಜಿನಲ್ಲಿ ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು.

ಮಾಜಿ ಐಎಎಸ್​ ಅಧಿಕಾರಿಯಾಗಿದ್ದ ನಯ್ಯರ್ ಅವರು ವಿಶ್ವ ಬ್ಯಾಂಕ್‌ನೊಂದಿಗೆ ಎಂಟು ವರ್ಷಗಳ ಕಾಲ ಪೂರ್ವ ಏಷ್ಯಾ ಮತ್ತು ಪೆಸಿಫಿಕ್‌ನ ಇಂಧನ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದರು. ನಂತರ ಅವರು 1986-1991 ರವರೆಗೆ ಐದು ವರ್ಷಗಳ ಕಾಲ ಸಾರ್ವಜನಿಕ ವಲಯದ ಉದ್ಯಮವಾದ ಗೇಲ್​ನ ಮೊದಲ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. 2009ರಲ್ಲಿ ನಯ್ಯರ್​ ಅವರ ಮೇಲ್ವಿಚಾರಣೆಯಲ್ಲಿ, ಹಗರಣ-ಕಳಂಕಿತ ಸತ್ಯಂ ಕಂಪ್ಯೂಟರ್ ಅನ್ನು ಟೆಕ್ ಮಹೀಂದ್ರಾ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net